ಉಡುಪಿ: ಟಗರು ಫೈಟ್, ಬುಲ್ ಫೈಟ್ ಕೂಡಾ ನೋಡಿರ್ತೀರಿ. ಅಷ್ಟೇ ಏಕೆ ಕೋಳಿ ಕಾಳಗ ನೋಡದವರುಂಟೇ..?. ಆದರೆ ವಯ್ಯಾರಕ್ಕೆ ಹೆಸರಾದ ನವಿಲಿನ ಕಾಳಗ ನೋಡಿದ್ದೀರಾ? ಕೇಳಿದ್ದೀರಾ? ಉಡುಪಿಯಲ್ಲಿ ಒಂದು ವಿಚಿತ್ರ ಕುಕ್ಕುಟ ಫೈಟ್ ನಡೆದಿದೆ. ಸ್ವತ ನವಿಲೇ ಫೈಟ್ಗೆ ಇಳಿದಿದೆ. ಅದು ತನ್ನ ಸರಿ ಸಮಾನರ ಜೊತೆಗಲ್ಲ. ಕೋಳಿ ಜೊತೆ ಕಾಳಗ ಮಾಡ್ತಿದೆ.
ಈ ದೃಶ್ಯ ನೋಡಿದರೆ ಆ ಗಾದೆ ನೆನಪಾಗುತ್ತೆ. ತಲೆ ಗಟ್ಟಿ ಇದೆ ಅಂತ ಬಂಡೆ ಜೊತೆಗೆ ಗುದ್ದಾಟ ಮಾಡಬಾರದು ಅಂತಾ. ಹಾಗಾಯ್ತು ಈ ಕೋಳಿ ಕಥೆ. ಇನ್ನೊಂದು ಹುಂಜದ ಜೊತೆಗೆ ಕಾದಾಡೊ ಬದಲು, ನವಿಲಿನ ಜೊತೆಗೆ ಫೈಟ್ ಮಾಡುತ್ತಿದೆ. ಗುಂಪು ಕಟ್ಟಿಕೊಂಡು ಹೆಣ್ಣು ಕೋಳಿಗೆ ಗಿರಕಿ ಹೊಡೆದುಕೊಂಡು ಸುತ್ತಾಡುತ್ತಿದ್ದ ಹುಂಜಕ್ಕೂ ಬೋರ್ ಆಗಿರ್ಬೇಕು. ಡಿಫರೆಂಟಾಗಿರ್ಲಿ ಅಂತಾ ಹುಂಜದ ಜೊತೆಗೆ ಫೈಟ್ ಮಾಡೋದು ಬಿಟ್ಟು ತನ್ನ ಶಕ್ತಿ ಪ್ರದರ್ಶನ ತೋರಿಸೊಕೆ ನವಿಲಿನ ಜೊತೆಗೆ ಫೈಟ್ ಶುರು ಮಾಡಿದೆ.
ಮಳೆ ಬಂದ್ರೆ ಗರಿಬಿಚ್ಚಿ ಕುಣಿದು ಹೆಣ್ಣು ನವಿಲುನ್ನು ರಮಿಸುವುದರಲ್ಲಿರುವ ಮಯೂರ ಕೂಡಾ, ನರ್ತನ ಬಿಟ್ಟು ಕುಕ್ಕುಟದ ಜೊತೆಗೆ ಕಾದಾಡುವುದರಲ್ಲಿ ಮೈ ಮರೆತಿದೆ. ಕುಂದಾಪುರ ಭಾಗದ ವ್ಯಕ್ತಿಯೊಬ್ಬರ ಮನೆ ಮುಂದೆ ನಡೆದ ನವಿಲು ಕೋಳಿ ಕಾಳಗ ನೋಡುತ್ತಿದ್ದ ಮಂದಿಯನ್ನು ಆಶ್ಚರ್ಯ ಚಕಿತರನ್ನಾಗಿಸಿದೆ.