ಉಡುಪಿ: ಕರಾವಳಿಯಲ್ಲಿ ದಿನಕಳೆದಂತೆ ಬಿಸಿಲ ತಾಪ ಹೆಚ್ಚುತ್ತಿದ್ದು, ನೀರಿಗಾಗಿ ಪರಿತಪಿಸುವಂತಾಗಿದೆ. ಹೀಗಾಗಿ ಮಳೆಗಾಗಿ ಅಲ್ಲಲ್ಲಿ ದೇವರ ಮೊರೆ ಹೋಗಲಾಗಿದೆ.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ದಿನವು ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದು, ದೇವಸ್ಥಾನದ ಕೆರೆಯಲ್ಲಿ ನಿಂತು ಮಳೆಗಾಗಿ ಋತ್ವಿಜರು ಮಂತ್ರ ಜಪಿಸುತ್ತಿದ್ದಾರೆ.
ಪ್ರತಿ ದಿನ ಬೆಳಿಗ್ಗೆಯಿಂದ ನಿರಂತರ ಎರಡು ಗಂಟೆಗಳ ಕಾಲ ಋತ್ವಿಜರಿಂದ ಪರ್ಜನ್ಯ ಜಪ ಪಠಿಸಲಾಗುತ್ತಿದೆ.