ETV Bharat / state

ಓವನ್ ಸ್ಫೋಟ: ದಾರುಣವಾಗಿ ಸಾವನ್ನಪ್ಪಿದ ಬೇಕರಿ ಮಾಲೀಕ

ಉಡುಪಿ ಜಿಲ್ಲೆಯ ಐರೋಡಿ ಎಂಬಲ್ಲಿ ಕಳೆದ 30 ವರ್ಷಗಳಿಂದ ಬೇಕರಿ ನಡೆಸುತ್ತಿದ್ದ ರಾಬರ್ಟ್ ಫುಟಾರ್ಡೊ ಎಂಬಾತ ಇಂದು ಬೇಕರಿಯಲ್ಲಿನ ಓವನ್​ ಸ್ಫೋಟಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ.

author img

By

Published : Aug 10, 2020, 1:35 PM IST

Owner of a bakery who died
ಓವನ್ ಸ್ಪೋಟದಿಂದ ಸಾವನ್ನಪ್ಪಿದ ರಾಬರ್ಟ್ ಫುಟಾರ್ಡೊ

ಉಡುಪಿ: ಓವನ್ ಸ್ಫೋಟಗೊಂಡು ಬೇಕರಿ ಮಾಲೀಕ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಐರೋಡಿಯಲ್ಲಿ ನಡೆದಿದೆ.

ಐರೋಡಿಯಲ್ಲಿ ಕಳೆದ 30 ವರ್ಷಗಳಿಂದ ರುಚಿ ಫುಟಾರ್ಡೋ ಫುಡ್ ಪ್ರಾಡಕ್ಟ್ ಎಂಬ ಬೇಕರಿಯನ್ನು ನಡೆಸುತ್ತಿದ್ದ ರಾಬರ್ಟ್ ಫುಟಾರ್ಡೊ, ಎಂದಿನಂತೆ ಇಂದು ಬೇಕರಿ ತೆರೆದು ಓವನ್ ಇದ್ದ ಭಾಗದಲ್ಲಿ ತೆರಳಿದಾಗ ಇದ್ದಕ್ಕಿದ್ದಂತೆ ಓವನ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ.

ಓವನ್ ಸ್ಫೋಟದಿಂದ ಸಾವನ್ನಪ್ಪಿದ ರಾಬರ್ಟ್ ಫುಟಾರ್ಡೊ

ಬೇಕರಿಯಲ್ಲಿದ್ದ ಓವನ್​​ ಅತ್ಯಂತ ದೊಡ್ಡ ಗಾತ್ರದ್ದಾಗಿದ್ದು, ಓವನ್​​ನ ಬಾಗಿಲು ಸ್ಫೋಟಗೊಂಡ ರಭಸಕ್ಕೆ ರಾಬರ್ಟ್ ಪುಟಾರ್ಡೋ ದೇಹ ಸಂಪೂರ್ಣ ಛಿದ್ರವಾಗಿದೆ.

ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಈ ಅವಘಡ ಸಂಭವಿಸಿದ್ದು, ಮಾಲೀಕ ರಾಬರ್ಟ್ ಫುಟಾರ್ಡೊ ಹೊರತುಪಡಿಸಿ ಓರ್ವ ಕಾರ್ಮಿಕನಿಗೆ ಸಣ್ಣ ಪುಟ್ಟ ಗಾಯವಾಗಿದೆ. ಕೋಟ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.