ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹೆಸರು ಘೋಷಣೆಯಾದ ಬಳಿಕವೂ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಮುಂದುವರೆದಿದೆ.

ಕಾರ್ಯಕರ್ತರ ಆಶೋತ್ತರಗಳಿಗೆ ಬಿಜೆಪಿ ಹೈ-ಕಮಾಂಡ್ ಬೆಲೆ ನೀಡಿಲ್ಲ, ಉತ್ತರದಲ್ಲಿ ಕೆಲಸ ಮಾಡದ ಸಂಸದರಿಗೆ ಈ ಬಾರಿ ಟಿಕೆಟ್ ನೀಡದ ಬಿಜೆಪಿ ಹೈಕಮಾಂಡ್ ಅದು ಹೇಗೆ ಕರ್ನಾಟಕದಲ್ಲಿ ಟಿಕೆಟ್ ನೀಡಿತು? ಎನ್ನುವ ಪ್ರಶ್ನೆಯನ್ನು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಮುಂದಿಟ್ಟಿದ್ದಾರೆ. ಸದ್ಯ ಗೋ ಬ್ಯಾಕ್ ಶೋಭಾ ಅಭಿಯಾನ ಮುಂದುವರಿದಿದ್ದು, ನೋಟಾ ಅಭಿಯಾನ ಪ್ರಾರಂಭಿಸುವ ಹೇಳಿಕೆಗಳು ವೈರಲ್ ಆಗುತ್ತಿವೆ.