ಉಡುಪಿ: ಕಾರ್ಕಳ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಎದ್ದ ಸುಂಟರಗಾಳಿಗೆ ಮನೆ ಮೇಲಿನ ಹಂಚುಗಳು ಹಾರಿಹೋಗಿವೆ. ಬೆಳೆದು ನಿಂತ ಬಾಳೆ, ತೆಂಗಿನ ಮರಗಳು ಮುರಿದು ಬಿದ್ದಿವೆ.
ತಾಲೂಕಿನ ಪೆರ್ವಾಜೆ ಮತ್ತು ಬೊಬ್ಬಳ ಪರಿಸರದ ಹತ್ತಕ್ಕೂ ಹೆಚ್ಚು ಮನೆಯ ಶೀಟುಗಳು ಮತ್ತು ಹಂಚು ಗಾಳಿ ಹೊಡೆತಕ್ಕೆ ಹಾರಿ ಹೋಗಿದ್ದು, ಅಡಿಕೆ, ಬಾಳೆ ತೆಂಗಿನಮರಗಳು ಕೂಡಾ ತುಂಡಾಗಿ ಬಿದ್ದಿದೆ. ಸುಮಾರು 10ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.