ETV Bharat / state

ಮೊದಲು ಪಕ್ಷದಲ್ಲಿ ಶಿಸ್ತು ಬೇಕು, ಇಲ್ಲಿ ಯಾರೂ ಪರ್ಮನೆಂಟ್ ಅಲ್ಲ.. ಸ್ವಪಕ್ಷೀಯರಿಗೆ ಚುಚ್ಚಿದ ಡಿಕೆಶಿ - d k shivakumar warned his own party members at udupi

ಪ್ರಮೋದ್ ಮಧ್ವರಾಜ್‌ ಬೆಂಬಲಿಗರಿಂದ ಶಕ್ತಿ ಪ್ರದರ್ಶನ ಪ್ರಯತ್ನ ನಡೆಯಿತು. ಸಮಾವೇಶ ಸ್ಥಳದ ಆವರಣದಲ್ಲಿ ಶಕ್ತಿ ಪ್ರದರ್ಶನ ಯತ್ನ ನಡೆದು ಶಾಮಿಯಾನ ಅಳವಡಿಸಿ ಮೌನ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು..

d-k-shivakumar
ಡಿ.ಕೆ.ಶಿವಕುಮಾರ್
author img

By

Published : Nov 29, 2020, 6:12 PM IST

ಉಡುಪಿ : ಮನೆಯ ಚೌಕಟ್ಟಿನಲ್ಲಿ ಭಿನ್ನಾಭಿಪ್ರಾಯ ಇರುತ್ತೆ ನಿಜ. ನನ್ನಿಂದಲೇ ಪಕ್ಷ ಅಂತಾ ಬ್ಲಾಕ್‌ಮೇಲ್ ಮಾಡಬಹುದು ಎಂದು ಯಾರಾದ್ರೂ ಭಾವಿಸಿದ್ರೆ ಅದು ಭ್ರಮೆ.. ಯಾರಾದ್ರೂ ಪಕ್ಷ ಬಿಟ್ಟು ಹೋಗುವವರಿದ್ರೆ ಗೌರವಯುತವಾಗಿ ಕಳುಹಿಸಿ ಕೊಡೋಣ. ಇಲ್ಲಿ ಯಾರೂ ಪರ್ಮನೆಂಟ್ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ವಪಕ್ಷೀಯರಿಗೆ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಸಾರಥಿ ಡಿ ಕೆ ಶಿವಕುಮಾರ್ ಮಾತನಾಡಿದರು

ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷದಲ್ಲಿ ಇರೋದು ಸೌಭಾಗ್ಯ. ಮೊದಲು ಶಿಸ್ತು ಬೇಕು. ಅಧಿಕಾರ ಎಲ್ಲರಿಗೂ ಸಿಗುತ್ತೆ. ಜಿಲ್ಲೆಯಲ್ಲಿ ಒಬ್ರೂ ಶಾಸಕರಿಲ್ಲ.

ಕಾರ್ಯಕರ್ತರು ಏನ್ ಮಾಡ್ಬೇಕು? ಎಲ್ಲಿ ತ್ಯಾಗ, ಶ್ರಮ‌ ಇಲ್ಲವೋ ಅಲ್ಲಿ ಫಲ ಇಲ್ಲ. ಹಿಂದೆ ಆಗಿದ್ದು ಮರೀರಿ. ಚಾಡಿ ಹೇಳೋದು ಬಿಡಿ, ನಾನಂತೂ ಯಾವ ಚಾಡಿನೂ ಕೇಳಲ್ಲ ಎಂದು ಎಚ್ಚರಿಸಿದರು.

ಪ್ರಮೋದ್ ಮಧ್ವರಾಜ್‌ ಬೆಂಬಲಿಗರಿಂದ ಶಕ್ತಿ ಪ್ರದರ್ಶನ ಪ್ರಯತ್ನ ನಡೆಯಿತು. ಸಮಾವೇಶ ಸ್ಥಳದ ಆವರಣದಲ್ಲಿ ಶಕ್ತಿ ಪ್ರದರ್ಶನ ಯತ್ನ ನಡೆದು ಶಾಮಿಯಾನ ಅಳವಡಿಸಿ ಮೌನ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು.

ಡಿಕೆಶಿ ಆಗಮಿಸುತ್ತಿದ್ದಂತೆ ಜೈಕಾರ ಕೂಗಿ ಸಭೆಗೆ ಆಗಮಿಸಿದ ಪ್ರಮೋದ್ ಮಧ್ವರಾಜ್ ಬೆಂಬಲಿಗರು, ಜಿಲ್ಲಾ ಕಾಂಗ್ರೆಸ್​​ ಸಮಿತಿ ವಿರುದ್ಧ ಅಸಮಾಧಾನಗೊಂಡಿದ್ದರು. ಜಿಲ್ಲಾ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಮಾವೇಶಕ್ಕೂ ಗೈರಾಗಿದ್ರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.