ಉಡುಪಿ : ನದಿಯಲ್ಲಿ ಮುಳುಗಿ ತಾಯಿ-ಬಾಲಕ ಸಾವನ್ನಪ್ಪಿರುವ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ನಡೆದಿದೆ.
ಶಾನ್ (11) ರೊಸಾರಿಯಾ(35) ಮೃತ ದುರ್ದೈವಿಗಳು. ನದಿ ಪಕ್ಕದಲ್ಲಿ ಹೋಗುತ್ತಿದ್ದ ವೇಳೆ ಬಾಲಕ ನೀರಿಗೆ ಬಿದ್ದಿದ್ದನು. ಆಗ ಮಗನನ್ನು ರಕ್ಷಿಸಲು ಹೋಗಿ ತಾಯಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.
ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ಬಾಲಕ ಹಾಗೂ ಮಹಿಳೆಯ ಮೃತದೇಹವನ್ನು ನಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: ರಾಜ್ಯದಲ್ಲಿಂದು ಕೋವಿಡ್ ಸೋಂಕು ಇಳಿಕೆ ; 801 ಮಂದಿಗೆ ಸೋಂಕು ದೃಢ, 15 ಬಲಿ