ಉಡುಪಿ : ಮಂಗಳ ಗ್ರಹವು ಇಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಗೋಚರಿಸಲಿದೆ ಎಂದು ಜಾತಕಗಳ ಶಾಸ್ತ್ರಜ್ಞ ಡಾ.ಭಟ್ ಮಾಹಿತಿ ನೀಡಿದ್ದಾರೆ.
ಮಂಗಳ ಗ್ರಹ ಭೂಮಿಯಿಂದ ಇಂದು ಕೇವಲ 6.20 ಕೋಟಿ ಕಿಲೋ ಮೀಟರ್ ದೂರದಲ್ಲಿ ಇರಲಿದೆ. ಈ ವಾರವಿಡೀ ಮಂಗಳ ಗ್ರಹವು ಬರಿಗಣ್ಣಿಗೆ ಸುಂದರವಾಗಿ ಗೋಚರವಾಗಲಿದೆ. ಇದಕ್ಕೆ ಮಾರ್ಸ್ ಒಪೋಸಿಷನ್ (ಮಂಗಳನ ವಿಯುತಿ) ಎನ್ನುತ್ತಾರೆ.
ಆದರೆ 2021 ಡಿಸೆಂಬರ್ ಸಮಯಕ್ಕೆ ಭೂಮಿಯಿಂದ ಸುಮಾರು 39 ಕೋಟಿ ಕಿ.ಮಿ ದೂರವಿರಲಿದ್ದು, ಕಂಡೂ ಕಾಣದಂತಿರುತ್ತಾನೆ. ಹಾಗಾಗಿ ಹತ್ತಿರ ಬಂದಾಗ ನೋಡಿ ಖುಷಿಪಡಬೇಕು ಎಂದು ಡಾ.ಭಟ್ ಹೇಳಿದ್ದಾರೆ.
ಪ್ರತೀ ಎರಡು ವರ್ಷ ಎರಡು ತಿಂಗಳಿಗೊಮ್ಮೆ ಹೀಗೆ ಹತ್ತಿರ ಬಂದರೂ, ಅಕ್ಟೋಬರ್ 13ರಂದು ಬರುವಷ್ಟೇ ದೂರದಲ್ಲಿ ಪುನಃ ಬರುವುದು 2035ಕ್ಕೆ ಮಾತ್ರ. ಈ ಹಿಂದೆ 2003 ರಲ್ಲಿ, 2018 ರಲ್ಲಿ ಮಂಗಳ ಗ್ರಹವು ಹೀಗೆಯೇ ಕಂಡಿದೆ ಎಂದು ಭಟ್ ಹೇಳಿದ್ದಾರೆ.