ಉಡುಪಿ: ಗಾಂಜಾ ಸೇವನೆ ಮತ್ತು ಮಾರಾಟ ಆರೋಪದಡಿ ಕುಂದಾಪುರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಕುಂದಾಪುರ ತಾಲೂಕಿನ ವಕ್ವಾಡಿ ಜನತಾ ಕಾಲೋನಿ ನಿವಾಸಿಗಳಾದ ಮೊಹಮ್ಮದ್ ಹನೀಫ್ (45), ಅಶ್ರಫ್ (29), ಬಂಧಿತ ಆರೋಪಿಗಳು. ಪ್ರಕರಣದ ಉಳಿದ ಆರೋಪಿಗಳಾದ ಮೊಹಮ್ಮದ್ ಆಸೀಫ್ ಹಾಗು ಇಲಿಯಾಸ್ ಇಬ್ಬರು ದಾಳಿ ವೇಳೆ ಪರಾರಿಯಾಗಿದ್ದಾರೆ.
ಉಡುಪಿ ಡಿಸಿಐಬಿ ಗೆ ಸಿಕ್ಕಿದ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದ್ದು, ಬಂಧಿತ ಆರೋಪಿಗಳಿಂದ 610 ಗ್ರಾಂ ತೂಕದ 20 ಸಾವಿರ ರೂ. ಮೌಲ್ಯದ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ-1985 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.