ETV Bharat / state

ಮಣಿಪಾಲದಲ್ಲಿ ಡ್ರಗ್ ಪೆಡ್ಲರ್ ಬಂಧನ - Udupi crime latest news

ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಡ್ರಗ್ ಪೆಡ್ಲರ್​ನನ್ನ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

Drug pedlar
Drug pedlar
author img

By

Published : Oct 15, 2020, 7:56 PM IST

ಉಡುಪಿ: ನಿಷೇಧಿತ ಮಾದಕ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಡ್ರಗ್ ಪೆಡ್ಲರ್ ನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ರಹ್ಮಾವರದ ಮಹಮ್ಮದ್ ಫಜಲ್ ಬಂಧಿತ ಆರೋಪಿ. ಈತ ಉಡುಪಿಯ ಫರ್ಹಾನ್ ಮತ್ತು ಸಫಾ ಜೊತೆ ಸೇರಿ ಡ್ರಗ್ಸ್ ಮಾರಾಟಕ್ಕೆ ಸಂಚು ನಡೆಸುತ್ತಿದ್ದನು.

ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 54 ನಿಷೇದಿತ ಎಮ್​​ಡಿಎಮ್​ಎ ಮಾತ್ರೆಗಳು, 30 ಗ್ರಾಂ ಬ್ರೌನ್ ಶುಗರ್ ಸೇರಿದಂತೆ ಅಂದಾಜು 4,63,600 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆನ್​​​ಲೈನ್​ನಲ್ಲಿ ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್ ಶುಗರ್ ತರಿಸುತ್ತಿದ್ದ ಫಜಲ್, ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನ ನಡೆಸುತ್ತಿದ್ದನು ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.