ETV Bharat / state

ಮಗುಚಿ ಬಿದ್ದ ದೋಣಿಯಲ್ಲಿದ್ದ ಯುವಕ ಈಜಿ ದಡ ಸೇರಿದ: ಬೋಟ್ ಎಳೆದುತರಲು ಮೀನುಗಾರರ ಹರಸಾಹಸ

ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಉಡುಪಿಯ ಕುಂದಾಪುರ, ಬೈಂದೂರು ಭಾಗದಲ್ಲಿ ಮಳೆ ಹೆಚ್ಚಾಗುತ್ತಿದ್ದು ಉಪ್ಪುಂದ, ಸೋಮೇಶ್ವರ ಭಾಗದಲ್ಲಿ ಸದ್ಯ ಅಲೆಗಳ ಅಬ್ಬರ ಹೆಚ್ಚಿದೆ. ಗಂಗೆಬೈಲಿನಲ್ಲಿ ದೋಣಿಯನ್ನು ದಡಕ್ಕೆ ಎಳೆತರಲು ಮೀನುಗಾರರು ಹರಸಾಹಸಪಟ್ಟಿದ್ದಾರೆ.

author img

By

Published : May 16, 2021, 11:44 AM IST

Updated : May 16, 2021, 12:04 PM IST

ಮಂಗಳೂರು ದೋಣಿ ದುರಂತ ಪ್ರಕರಣ,Mangalore boat disaster incident
ಮಂಗಳೂರು ದೋಣಿ ದುರಂತ ಪ್ರಕರಣ

ಉಡುಪಿ: ಮಂಗಳೂರು ಟಗ್​ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಯುವಕ ಉಡುಪಿಯ ಪಡುತೋನ್ಸೆ ಬೆಂಗ್ರೆ ಬಳಿ ದಡಕ್ಕೆ ಬಂದು ತಲುಪಿದ್ದಾರೆ.

ನಸೀಮ್ ಎಂಬವರು ಟ್ಯೂಬ್ ಸಹಾಯದಿಂದ ಸತತವಾಗಿ ಈಜಿ ದಡಕ್ಕೆ ಬದುಕಿ ಬಂದಿದ್ದಾರೆ. ಹರಿಯಾಣ ಮೂಲದ ಯುವಕ ಮಂಗಳೂರು ಎಂಆರ್​ಪಿಎಲ್ ಕಂಪನಿಯ ನೌಕರರಾಗಿದ್ದಾರೆ. ಮಂಗಳೂರಿನಲ್ಲಿ ದೋಣಿ ಮಗುಚಿ ಬಿದ್ದ ಸಂದರ್ಭ ಇವರು ನೀರುಪಾಲಾಗಿದ್ದರು.

ಈತನ ಜೊತೆಗೆ ನೀರುಪಾಲಾಗಿದ್ದ ಇನ್ನಿಬ್ಬರು ಮಟ್ಟು ಪರಿಸರದಲ್ಲಿ ಸೇರಿದ್ದರು. ನಸೀಮ್​ನನ್ನು ವಿಚಾರಣೆ ಮಾಡಿ ಮಲ್ಪೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಟಗ್​ನಲ್ಲಿದ್ದ ಒಟ್ಟು 9 ಜನರಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ದಡ ಸೇರಿದ್ದಾರೆ. ಇನ್ನೂ 5 ಜನರು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ತೌಕ್ತೆ ಹೊಡೆತಕ್ಕೆ ಆಳ ಸಮುದ್ರದಲ್ಲಿ ಸಿಲುಕಿದ ಎರಡು ಬೋಟ್​ಗಳು; 5 ಮಂದಿ ನಾಪತ್ತೆ

ಭೋರ್ಗರೆಯುತ್ತಿದೆ ಸಮುದ್ರ: ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಉಡುಪಿಯ ಕುಂದಾಪುರ, ಬೈಂದೂರು ಭಾಗದಲ್ಲಿ ಮಳೆ ಹೆಚ್ಚಾಗುತ್ತಿದ್ದು ಬೈಂದೂರು, ಉಪ್ಪುಂದ, ಸೋಮೇಶ್ವರ ಭಾಗದಲ್ಲಿ ಸದ್ಯ ಅಲೆಗಳ ಅಬ್ಬರ ಹೆಚ್ಚಿದೆ. ಗಂಗೆಬೈಲಿನಲ್ಲಿ ದೋಣಿಯನ್ನು ದಡಕ್ಕೆ ಎಳೆದುತರಲು ಮೀನುಗಾರರು ಹರಸಾಹಸಪಟ್ಟಿದ್ದಾರೆ.

ಬೋಟ್​ನ್ನು ದಡಕ್ಕೆ ಎಳೆದುತರಲು ಮೀನುಗಾರರು ಹರಸಾಹಸ

ಬೈಂದೂರು ಮತ್ತು ಮರವಂತೆ ಭಾಗದಲ್ಲಿ 30ಕ್ಕೂ ಹೆಚ್ಚು ಕುಟುಂಬವನ್ನು ಸ್ಥಳೀಯ ಶಾಲಾ-ಕಾಲೇಜುಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಅಲ್ಲಿಯೇ ಸಂತ್ರಸ್ತ ಕುಟುಂಬಗಳಿಗೆ ಗಂಜಿ ಕೇಂದ್ರ ಆರಂಭಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಭೇಟಿ ನೀಡಿ, ಪರಿಶೀಲಿಸಿದರು.

Last Updated : May 16, 2021, 12:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.