ಉಡುಪಿ: ಉಡುಪಿಯ ಸ್ವರ್ಣ ನದಿಯಲ್ಲಿ ಕೊಳಲನೂದುವ ಕೃಷ್ಣನ ಮೂರ್ತಿಯೊಂದು ಮೀನಿಗೆ ಗಾಳ ಹಾಕುವಾಗ ಯುವಕನೊಬ್ಬನಿಗೆ ಸಿಕ್ಕಿದ್ದು, ಇದು ಎಲ್ಲಿಯ ಮೂರ್ತಿ ಎನ್ನುವ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಇನ್ನೂ ಈ ಮೂರ್ತಿ ಸಿಕ್ಕಿದ ನಂತರ ಸ್ಥಳೀಯ ಹಿರಿಯಡ್ಕ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಈ ಕೊಳಲನೂದುವ ಮೂರ್ತಿ ಸುಮಾರು 8 ಕೆಜಿ ತೂಕವಿದ್ದು, ಸದ್ಯ ಪೊಲೀಸ್ ಠಾಣೆಯಲ್ಲಿ ಇರಿಸಿದ್ದಾರ. ಆದರೆ ಈ ಬಗ್ಗೆ ಇತಿಹಾಸ ತಜ್ಜರೊಬ್ಬರು ಹೇಳುವ ಪ್ರಕಾರ ಮೂರ್ತಿಯನ್ನು ಚಿತ್ರದಲ್ಲಿ ನೋಡಿದಾಗ, ಅದು ತೀರಾ ಹಳೆಯ ಮೂರ್ತಿಯ ಹಾಗಿಲ್ಲ ಇತ್ತೀಚಿನ ಮೂರ್ತಿ ಹಾಗಿದೆ.. ಅಂಗಡಿಯಿಂದ ತಂದು ಮನೆಯಲ್ಲಿ ಇಟ್ಟಾಗ, ಮೂರ್ತಿಯಿಂದ ಏನಾದರೂ ತೊಂದರೆ ಆಗಬಹುದು ಅಂತ ಹೆದರಿ ಕೂಡ ಎಸೆದಿರುವ ಸಾಧ್ಯತೆ ಇದೆ ಎನ್ನುತ್ತಾರೆ.. ಸದ್ಯ ಈ ವಿಗ್ರಹ ಹಿರಿಯಡ್ಕ ಠಾಣೆಯಲ್ಲಿ ಇದ್ದು ತನಿಖೆ ನಡೆಸಲಾಗುತ್ತಿದೆ.