ETV Bharat / state

ಒಂದೇ ಒಂದು ಮೆಸೇಜ್​ಗೆ ಮಂಗಳಮುಖಿ ಮನೆ ಬಾಗಿಲಿಗೆ ಆಹಾರ ಸಾಮಗ್ರಿ ತಲುಪಿಸಿದ ಕಿಚ್ಚ - Kiccha Sudeepa Charitable Trust

ಉಡುಪಿಯ ಮಂಗಳಮುಖಿಯೊಬ್ಬರ ಮನೆಗೆ ಆಹಾರ ಸಾಮಗ್ರಿಗಳ ಕಿಟ್ ತಲುಪಿಸುವ ಮೂಲಕ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸಹಾಯ ಮಾಡಿದೆ.

Food kit to transgender
ನಟ ಸುದೀಪ್​ನಿಂದ ಮಂಗಳಮುಖಿಗೆ ಸಹಾಯ
author img

By

Published : May 23, 2021, 7:46 AM IST

Updated : May 23, 2021, 9:08 AM IST

ಉಡುಪಿ: ಕೋವಿಡ್ ಎಲ್ಲ ವರ್ಗದ ಜನರಿಗೂ ಒಂದಿಲ್ಲೊಂದು ರೀತಿಯ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಮಂಗಳಮುಖಿಯರೂ ಕೂಡ ಹೊರತಾಗಿಲ್ಲ. ದಿನನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ಅನೇಕ ತೃತೀಯ ಲಿಂಗಿಗಳಿಗಿದೆ. ಹೀಗಾಗಿ ತಮಗೆ ಸಹಾಯ ಮಾಡಿ ಅಂತ ಉಡುಪಿಯ ಮಂಗಳಮುಖಿಯೊಬ್ಬರು ನಟ ಕಿಚ್ಚ ಸುದೀಪ್ ಅವರಿಗೆ ಸಂದೇಶ ಕಳುಹಿಸಿದ್ದರು. ಮಂಗಳಮುಖಿಯ ಕಷ್ಟಕ್ಕೆ ಸ್ಪಂದಿಸಿದ ಅವರು, ಕಿಚ್ಚ ಸುದೀಪಾ ಚಾರಿಟೇಬಲ್ ಸೊಸೈಟಿ ಮೂಲಕ ದಿನಸಿ ಕಿಟ್ ಕಳುಹಿಸಿಕೊಟ್ಟಿದ್ದಾರೆ.

ಮಂಗಳಮುಖಿಯ ಮನೆಗೆ ಆಹಾರ ಸಾಮಗ್ರಿ ತಲುಪಿಸಿದ ಕಿಚ್ಚ ಸುದೀಪಾ ಚಾರಿಟೇಬಲ್ ಟ್ರಸ್ಟ್

ಉಡುಪಿಯ ಬೈಲೂರಿನಲ್ಲಿ ವಾಸವಿರುವ ಮಂಗಳಮುಖಿ ಸಾನಿಯಾ ಅವರು, ಸಹಾಯ ಮಾಡುವಂತೆ ಇನ್​ಸ್ಟಾಗ್ರಾಂನಲ್ಲಿ ನಟ ಸುದೀಪ್ ಅವರಿಗೆ ಸಂದೇಶ ಕಳುಹಿಸಿದ್ದರಂತೆ. ಸಾನಿಯಾ ಅವರ ಸಂದೇಶ ನೋಡಿದ ಸುದೀಪ್, ಮಾಹಿತಿ ಕಳುಹಿಸಲು ಹೇಳಿದ್ದಾರೆ. ಬಳಿಕ ಕಿಚ್ಚ ಸುದೀಪಾ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಕಿಟ್ಟಿ ಅಣ್ಣ ಅಂತ ನಿಮಗೆ ಕಾಲ್ ಮಾಡ್ತಾರೆ ಎಂದು ರಿಪ್ಲೈ ಮಾಡಿದ್ದರು. ಬಳಿಕ ಸಾನಿಯಾ ಅವರ ವಿಳಾಸ ಪಡೆದು, ಟ್ರಸ್ಟ್‌ನ ಉಡುಪಿ ದಕ್ಷಿಣ ಕನ್ನಡ ಉಸ್ತುವಾರಿ ಆರ್ಯ ದೀಪ್ನಾ ಕರ್ಕೇರಾ ಅವರ ಮೂಲಕ ದಿನಸಿ ಸಾಮಗ್ರಿಗಳನ್ನು ಒದಗಿಸಿದ್ದಾರೆ.

ಇದನ್ನೂ ಓದಿ : ಸಂಕಷ್ಟದಲ್ಲಿದ್ದ ಕರ್ನಾಟಕ ಕಬಡ್ಡಿ ಆಟಗಾರ್ತಿ ತೇಜಸ್ವಿನಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ

ದಿನಸಿ ಕಿಟ್‌ನಲ್ಲಿ ಒಂದು ತಿಂಗಳಿಗೆ ಆಗುವಷ್ಟು ಸಾಮಗ್ರಿಗಳಿವೆ. 'ಸುದೀಪ್ ಅವರಿಗೆ ಲಕ್ಷಾಂತರ ಮಂದಿ ಮೆಸೇಜ್ ಮಾಡ್ತಾರೆ. ಹೀಗಾಗಿ, ನಮ್ಮ ಸಂದೇಶ ನೋಡ್ತಾರೆ ಅಂತ ನಿರೀಕ್ಷೆ ಇರಲಿಲ್ಲ. ಆದರೆ, ಮೆಸೇಜ್ ನೋಡಿ ಕಿಟ್ ಕಳುಹಿಸಿದ್ದು ತುಂಬಾ ಖುಷಿ ಕೊಟ್ಟಿದೆ' ಎಂದು ಮಂಗಳಮುಖಿ ಸಾನಿಯಾ ಹೇಳಿದರು.

Last Updated : May 23, 2021, 9:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.