ETV Bharat / state

ಧರ್ಮಸ್ಥಳದಿಂದ ಶೃಂಗೇರಿ ತೆರಳುವಾಗ ರಸ್ತೆ ಅಪಘಾತ : ಮಗು ಸೇರಿ ದಂಪತಿ ಸಾವು - ಈಟಿವಿ ಭಾರತ ಕನ್ನಡ

ಖಾಸಗಿ ಬಸ್​ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 2 ವರ್ಷದ ಮಗು ಸೇರಿ ದಂಪತಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಧರ್ಮಸ್ಥಳ ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ನಡೆದಿದೆ.

karkala-road-accident
ಧರ್ಮಸ್ಥಳದಿಂದ ಶೃಂಗೇರಿ ತೆರಳುವಾಗ ರಸ್ತೆ ಅಪಘಾತ : ಮಗು ಸೇರಿ ದಂಪತಿ ಸಾವು
author img

By

Published : Dec 10, 2022, 6:40 PM IST

ಉಡುಪಿ : ಖಾಸಗಿ ಬಸ್​ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 2 ವರ್ಷದ ಮಗು ಸೇರಿ ದಂಪತಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಧರ್ಮಸ್ಥಳ ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ನಾಗರಾಜ್ (40), ಪ್ರತ್ಯುಷಾ (32) ಮೃತದಂಪತಿ ಎಂದು ತಿಳಿದುಬಂದಿದೆ.

ನಾಗರಾಜ್​ ಮತ್ತು ಪ್ರತ್ಯುಷಾ ದಂಪತಿ ತಮ್ಮ ಎರಡು ವರ್ಷದ ಮಗುವಿನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ಧರು. ಅಲ್ಲಿಂದ ಶೃಂಗೇರಿಗೆ ತೆರಳುತ್ತಿದ್ದಾಗ ನೆಲ್ಲಿಕಾರು ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡ ಪರಿಶೀಲನೆ ನಡೆಸಿದ್ದು, ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಟ್ರಕ್ ಕಾರು ಮಧ್ಯೆ ಅಪಘಾತ: ಮೂವರು ಸ್ಥಳದಲ್ಲೇ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.