ETV Bharat / state

ದೈವಸ್ಥಾನದ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದ ವ್ಯಕ್ತಿ ಹಠಾತ್​ ಸಾವು.. ಪಡುಬಿದ್ರಿಯಲ್ಲೊಂದು ಕಾಂತಾರದ ಕತೆ

500 ವರ್ಷಗಳ ಇತಿಹಾಸವಿರುವ ಪಡುಹಿತ್ಲು ಜಾರಂದಾಯ ದೈವಸ್ಥಾನ-ದೈವಸ್ಥಾನದ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಸಮಿತಿ ಮಾಜಿ ಅಧ್ಯಕ್ಷ- ಕೋರ್ಟ್​ ತಡೆಯಾಜ್ಞೆ ತಂದ ಮರುದಿನವೇ ಹೊಸ ಟ್ರಸ್ಟ್​ ಅಧ್ಯಕ್ಷ ಜಯ ಪೂಜಾರಿ ಸಾವು

Paduhitlu Jarandaya Daivasthana
ಪಡುಹಿತ್ಲು ಜಾರಂದಾಯ ದೈವಸ್ಥಾನ
author img

By

Published : Jan 7, 2023, 1:23 PM IST

Updated : Jan 7, 2023, 4:15 PM IST

ಪಡುಬಿದ್ರಿಯಲ್ಲೊಂದು ಕಾಂತಾರದ ಕತೆ

ಪಡುಬಿದ್ರಿ(ಉಡುಪಿ): ಉಡುಪಿ ಜಿಲ್ಲೆಯ ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನದಲ್ಲಿ ಕಾಂತಾರ ಕತೆಯನ್ನು ಹೋಲುವ ಘಟನೆ ನಡೆದಿದೆ. 500 ವರ್ಷ ಇತಿಹಾಸ ಇರುವ ಈ ದೈವಸ್ಥಾನದ ವಿರುದ್ಧ ಇದೇ ಮೊದಲ ಬಾರಿ ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್​ನಿಂದ ತಡೆಯಾಜ್ಞೆ ತಂದ ಮರುದಿನವೇ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದು ದೈವದ ಶಕ್ತಿ ಎಂದು ತಿಳಿದು ಊರಿನವರು ತಲೆದೂಗಿದ್ದಾರೆ.

ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನ ಊರ ಸಮಸ್ತರಿಗೆ ಭಕ್ತಿ ಮತ್ತು ನಂಬಿಕೆಯ ಮೂಲವಾಗಿತ್ತು. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯ ನೇಮೋತ್ಸವ ನಡೆಯುತ್ತಿದ್ದು, ಊರವರು ಭಾಗಿಯಾಗುತ್ತಾರೆ. ಈ ದೈವಸ್ಥಾನವನ್ನು ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಅವರು ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅಧಿಕಾರದ ಹಪಾಹಪಿಯಿಂದ ಪ್ರತ್ಯೇಕ 5 ಜನರ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇಲ್ಲಿಯ ಸಾನದ(ದೈವಸ್ಥಾನ) ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರು. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸಿದ್ದರು.

Jaya Pujari and Prakash Shetty
ಜಯ ಪೂಜಾರಿ ಹಾಗೂ ಪ್ರಕಾಶ್​ ಶೆಟ್ಟಿ

ಕೋರ್ಟ್ ಮೆಟ್ಟಿಲೇರಿದ್ದ ಪ್ರಕಾಶ್​ ಶೆಟ್ಟಿ: ಪ್ರತಿ ವರ್ಷದಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ, ಜನವರಿ 7 ರಂದು ಕೋಲ ನಡೆಸಲು ನಿರ್ಧರಿಸಿತ್ತು. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಜಯ ಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ‌ ಅವರು ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು. ಆಶ್ಚರ್ಯದ ಸಂಗತಿ ಎಂದರೆ ಡಿಸೆಂಬರ್ 23ಕ್ಕೆ ತಡೆಯಾಜ್ಞೆ ತಂದ ಜಯ ಪೂಜಾರಿ, ಡಿಸೆಂಬರ್ 24 ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆಶ್ಚರ್ಯವೆಂದರೆ ಸಮೀಪದಲ್ಲೇ ತಂಬಿಲ ಸೇವೆ ನಡೆಯುತ್ತಿದ್ದ ವೇಳೆ ಇವರು ಎಲ್ಲರೆದುರೇ ಸಾವನ್ನಪ್ಪಿದ್ದರು. ಈ ಅಕಸ್ಮಿಕ​ ಸಾವನ್ನು ನೋಡಿದ ಊರಿನ ಜನರು ಮೂಕವಿಸ್ಮಿತರಾಗಿದ್ದರು.

ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಖ್ಯಾತ ವಕೀಲ ಬಿ.ನಾಗರಾಜ್ ಅವರು ತಡೆಯಾಜ್ಞೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಎಲ್ಲಾ ಘಟನೆಗಳನ್ನು ನೋಡಿಯೂ ಸುಮ್ಮನಿರದೆ ಟ್ರಸ್ಟಿ ಪ್ರಕಾಶ್​ ಶೆಟ್ಟಿ ಇದಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಕೊನೆಗೆ ಜಾರಂದಾಯ ದೈವಸ್ಥಾನದ ದೈವ ನರ್ತಕ ಭಾಸ್ಕರ ಬಂಗೇರ ಅವರನ್ನು ಬೆದರಿಸಿ ತಾವು ಹೇಳಿದಂತೆ ದೈವದ ನುಡಿ ಕೊಡಬೇಕು ಎಂದು ಬೆದರಿಸಿದ್ದರು ಎಂದು ಹೇಳಿದ್ದಾರೆ.

ಇಂದು ನಡೆಯಬೇಕಿದ್ದ ದೈವಸ್ಥಾನದ ನೇಮೋತ್ಸವವನ್ನು ದೈವಸ್ಥಾನ ಸಮಿತಿ ಜಯ ಪೂಜಾರಿ ಅವರು ನಿಧನ ಹೊಂದಿದ ಕಾರಣ ಮುಂದೂಡಿಕೆ ಆಗಿದೆ. ಆದರೆ ಹಠ ಬಿಡದ ಪ್ರಕಾಶ್​ ಶೆಟ್ಟಿ ಮತ್ತು ತಂಡದವರು ಜಯ ಪೂಜಾರಿ ಅವರ ಉತ್ತರಕ್ರಿಯೆ ದಿನವಾದ ಇಂದೇ ಕಾಲಾವಧಿ ನೇಮೋತ್ಸವ ಮಾಡಲು ಹೊರಟಿದ್ದರು. ಕೋರ್ಟ್​ನಲ್ಲಿ ತಡೆಯಾಜ್ಞೆ ತೆರವಾಗಿದ್ದರೂ ಊರವರ ವಿರುದ್ಧ ಹೊರಟಿರುವ ಪ್ರಕಾಶ್​ ಶೆಟ್ಟಿ ಮತ್ತು ತಂಡದ ವಿರುದ್ಧ ಇದೀಗ ಊರಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೀಗ ಊರ ಸಮಸ್ತರು ಸಭೆ ಸೇರಿ 500 ವರ್ಷಗಳ ಇತಿಹಾಸ ಇರುವ ಜಾರಂದಾಯ ಬಂಟ ಸೇವಾ ಸಮಿತಿ ಮಾಡುವ ನಿರ್ಣಯಕ್ಕೆ ಬದ್ಧ ಎಂಬ ನಿರ್ಣಯಕ್ಕೆ ಬಂದಿದ್ದಾರೆ.

ಜಾರಂದಾಯ ನೇಮೋತ್ಸವ ಗೊಂದಲ- ಕಾನೂನು ತೀರ್ಮಾನದ ನಂತರ ಮುಂದಿನ ನಿರ್ಧಾರ: ಜಾರಂದಾಯ ಬಂಟ ದೇವಸ್ಥಾನ ವಾರ್ಷಿಕ ನೇಮೋತ್ಸವದ ಗೊಂದಲ ಮುಂದುವರಿದಿದ್ದು, ನೇಮೋತ್ಸವ ಮಾಡದೆ ಇರಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ದೇವಸ್ಥಾನದ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದ ಟ್ರಸ್ಟ್ ಮುಖಂಡರು ಕಾನೂನು ತೀರ್ಮಾನದ ನಂತರ ಮುಂದಿನ ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ. ಇಂದು ಜಾರಂದಾಯ ದೈವಕ್ಕೆ ನೇಮೋತ್ಸವ ಮಾಡದೆ ಇರಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ: ಅಕ್ರಮವಾಗಿ ದೈವಸ್ಥಾನ ಪ್ರವೇಶಿಸಿ ಅಂಗಣ ಸುತ್ತ ರಕ್ತ ಹರಿಸಿದ್ದ ವ್ಯಕ್ತಿ ಬಂಧನ

Last Updated : Jan 7, 2023, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.