ETV Bharat / state

ಆತ್ಮಗಳಿಗೆ ಪಿತೃ ಸ್ಥಾನ ಕೊಡಿಸುವ ಅಪರೂಪದ ‘ಕಾಲೆಕೋಲ’.. ಇದು ತುಳುನಾಡಿನ ವಿಶಿಷ್ಟ ಆಚರಣೆ

ಪ್ರೇತಾತ್ಮಕ್ಕೆ ಪಿತೃಸ್ಥಾನ ನೀಡಲು, ಸಮಾಧಿಯಲ್ಲಿ ನೆಲೆಯಾಗಿಸಲು ಈ ಸಂಪ್ರದಾಯ ಪಾಲಿಸಲಾಗುತ್ತದೆ. ಬಂಟ ದೈವಗಳು ಬಂದು ಆತ್ಮವನ್ನು ಕರೆದೊಯ್ಯುವ ಅಪರೂಪದ ಸನ್ನಿವೇಷ ಇಲ್ಲಿ ಕುಣಿತದ ರೂಪದಲ್ಲಿ ಪ್ರಸ್ತುತಗೊಳ್ಳುತ್ತದೆ. ಪಿತೃಗಳು ಸಂತುಷ್ಟರಾಗಿದ್ದರೆ, ಆ ಕುಟುಂಬಕ್ಕೆ ಏಳಿಗೆಯಾಗುತ್ತೆ. ಹಾಗಾಗಿ ಮೃತಪಟ್ಟು 13 ನೇ ದಿನಕ್ಕೆ ಈ ಆಚರಣೆ ನಡೆಸಲಾಗುತ್ತದೆ.

Kale Kola
ಕಾಲೆಕೋಲ
author img

By

Published : Oct 4, 2020, 3:41 PM IST

ಉಡುಪಿ: ತುಳುನಾಡ ಜನರು ದೇವರ ಹರಕೆಯಾದರೂ ಬಾಕಿ ಇಟ್ಟಾರು.., ಆದ್ರೆ ಪಿತೃಗಳ ಆರಾಧನೆಯಲ್ಲಿ ಯಾವುದೇ ಅಪಚಾರ ಮಾಡೋದಿಲ್ಲ. ಕುಟುಂಬದ ಹಿರಿಯರು ಮೃತಪಟ್ಟಾಗ, ಅವರ ಆತ್ಮ ಅಷ್ಟೊಂದು ಸುಲಭದಲ್ಲಿ ಮನೆ ಬಿಟ್ಟು ಹೋಗಲು ಒಪ್ಪೋದಿಲ್ಲ. ಆಗ ಸ್ವತಃ ಬಂಟ ದೈವಗಳೇ ಬಂದು ಆ ಆತ್ಮಗಳಿಗೆ ಪಿತೃ ಸ್ಥಾನ ಕೊಡಿಸುವ ಅಪರೂಪದ ಆಚರಣೆಯೊಂದು ಕರಾವಳಿಯಲ್ಲಿದೆ. ಅದುವೇ ‘ಕಾಲೆಕೋಲ’.

ಬದುಕಿದ್ದಾಗ ಹಿರಿಯರಿಗೆ ಗೌರವ ಕೊಡೋದು ನಮ್ಮ ಸಂಸ್ಕಾರ. ಅವರ ನಿಧನದ ನಂತರವೂ ಅವರ ಆತ್ಮಗಳಿಗೆ ಸದ್ಗತಿ ಕೊಡಿಸುವುದು ನಮ್ಮ ಸಂಸ್ಕೃತಿ. ದೇಹದಿಂದ ಆತ್ಮ ದೂರವಾದರೂ ಮನೆ ಮತ್ತು ಕುಟುಂಬದ ಮೇಲಿನ ಮೋಹ ಹೋಗೋದಿಲ್ವಂತೆ. ಇಲ್ಲಿ ಕಾಣಿಸುತ್ತಿರುವ ಈ ಕಪ್ಪು ಮೈ ಬಣ್ಣದ ವೇಷಧಾರಿ ಆ ಮೋಹದ ಸಂಕೇತ. ಹೌದು, ಕರಾವಳಿಯ ಮನೆತನಗಳಲ್ಲಿ ಕುಟುಂಬದ ಹಿರಿಯರು ಮೃತಪಟ್ಟಾಗ, ಈ ಅಪರೂಪದ ಆಚರಣೆ ನಡೆಯುತ್ತೆ. ಅಪರಕ್ರಿಯೆಯ ದಿನ ಮೋಹಕ್ಕೊಳಗಾದ ಪ್ರೇತಾತ್ಮವನ್ನು ಮನೆ ಪಕ್ಕದ ಸಮಾಧಿಗೆ ಕೊಂಡೊಯ್ಯಲು ಸ್ವತಃ ಬಂಟ ದೈವಗಳು ಧರೆಗಿಳಿದು ಬರುತ್ತವೆ. ಬಾಳಿ ಬದುಕಿದ ಮನೆಯನ್ನು ಬಿಟ್ಟು ಹೋಗಲು ಪ್ರೇತಾತ್ಮ ಅನುಭವಿಸುವ ಸಂಕಟ, ವೇದನೆಗಳೆಲ್ಲವೂ ಇಲ್ಲಿ ನರ್ತನ ರೂಪದಲ್ಲಿ ಕಾಣಬಹುದು. ಮನೆಯ ಪ್ರತಿಯೊಬ್ಬರನ್ನೂ ನೆನೆದು, ಹಾರೈಸಿ ಪ್ರೇತಾತ್ಮ ಮನೆಯಿಂದ ಬೀಳ್ಕೊಡುವ ಗಳಿಗೆ ನಿಜಕ್ಕೂ ಭಾವನಾತ್ಮಕವಾಗಿರುತ್ತದೆ. ದೈವಗಳ ಆರಾಧನೆಯ ಸ್ವರೂಪದಲ್ಲಿ ಕಾಲೆಕೋಲವಾಗಿ ಈ ಅಪರಕ್ರಿಯೆ ನಡೆಯುತ್ತದೆ. ಅಂದಹಾಗೆ ಈ ಆಚರಣೆ ನಡೆದಿದ್ದು, ಉಡುಪಿ ಜಿಲ್ಲೆಯ ಉಪ್ಪೂರು ಸಮೀಪದ ಉಗ್ಗೇಲುಬೆಟ್ಟಿನಲ್ಲಿ. ತಮ್ಮ ಮನೆಯ ಹಿರಿಯಜ್ಜಿ ನಿಧನರಾದಾಗ ಕುಟುಂಬಿಕರು ಈ ಕಾಲೆಕೋಲವನ್ನು ಮಾಡಿಸಿದ್ದಾರೆ.

ಕಾಲೆಕೋಲ

ಹೆಚ್ಚಾಗಿ ಕುಟುಂಬದ ಹಿರಿಯರು ವಯೋಸಹಜವಾಗಿ ಸಾವನ್ನಪ್ಪಿದಾಗ ಈ ವಿಧಿ ವಿಧಾನ ನಡೆಯುತ್ತೆ. ಅದರಲ್ಲೂ ಅನಾರೋಗ್ಯ ಪೀಡಿತರಾಗಿ ನರಳಿ ಮೃತಪಟ್ಟಾಗ, ಅವರ ಮೇಲಿನ ಪ್ರೀತಿ ಹಾಗೂ ಸದ್ಗತಿಗಾಗಿ ಈ ದೈವಾರಾಧನೆ ನಡೆಸಲಾಗುತ್ತೆ. ತುಳುನಾಡಿನ ಮೂಲ ಆಚರಣೆಯಲ್ಲಿ ಇಹಲೋಕ ತ್ಯಜಿಸಿದ ನಂತರದ ಸ್ವರ್ಗ-ನರಕದ ಯಾವುದೇ ಕಲ್ಪನೆಯಿಲ್ಲ. ಏನಿದ್ದರೂ ಪಿತೃಗಳನ್ನು ಜೊತೆಗೆಯೇ ಇರಿಸಿಕೊಂಡು ಪೂಜಿಸುವುದು ಇಲ್ಲಿನ ಪದ್ಧತಿ. ಅದಕ್ಕನುಸಾರವಾಗಿ ಪ್ರೇತಾತ್ಮಕ್ಕೆ ಪಿತೃಸ್ಥಾನ ನೀಡಲು, ಸಮಾಧಿಯಲ್ಲಿ ನೆಲೆಯಾಗಿಸಲು ಈ ಸಂಪ್ರದಾಯ ಪಾಲಿಸಲಾಗುತ್ತದೆ. ಬಂಟ ದೈವಗಳು ಬಂದು ಆತ್ಮವನ್ನು ಕರೆದೊಯ್ಯುವ ಅಪರೂಪದ ಸನ್ನಿವೇಷ ಇಲ್ಲಿ ಕುಣಿತದ ರೂಪದಲ್ಲಿ ಪ್ರಸ್ತುತಗೊಳ್ಳುತ್ತದೆ. ಪಿತೃಗಳು ಸಂತುಷ್ಟರಾಗಿದ್ದರೆ, ಆ ಕುಟುಂಬಕ್ಕೆ ಏಳಿಗೆಯಾಗುತ್ತೆ. ಹಾಗಾಗಿ ಮೃತಪಟ್ಟು 13 ನೇ ದಿನಕ್ಕೆ ಈ ಆಚರಣೆ ನಡೆಸಲಾಗುತ್ತದೆ.

ತನ್ನ ಕುಟುಂಬದ ಮುಂದಿನ ತಲೆಮಾರುಗಳು ತನ್ನನ್ನು ಮರೆಯಬಾರದು ಅನ್ನೋದೇ ಬದುಕಿದ್ದಾಗ ಮನುಷ್ಯನಿಗಿರುವ ಅತಿದೊಡ್ಡ ಆಸೆ. ಹಿರಿಯರ ಆಸೆ ತೀರಿಸುವ ಕಾಲೆಕೋಲ ನಿಜಕ್ಕೂ ಜನಪದದ ಅದ್ಭುತ ಸಂಸ್ಕಾರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.