ETV Bharat / state

ಇಂಟರ್‌ನ್ಯಾಷನಲ್ ಆರ್ಟ್ ಐಕಾನ್ ಸ್ಪರ್ಧೆ: ಟಾಪ್ 100ರಲ್ಲಿ ಉಡುಪಿಯ ವಿಘ್ನೇಶ್

author img

By

Published : Nov 15, 2022, 11:00 AM IST

Updated : Nov 15, 2022, 11:31 AM IST

ಇಂಟರ್​ ನ್ಯಾಷನಲ್ ಆರ್ಟ್ ಐಕಾನ್ ಸ್ಪರ್ಧೆಯ ಟಾಪ್ 100ರಲ್ಲಿ ಉಡುಪಿಯ ಯುವ ಕಲಾವಿದ ವಿಘ್ನೇಶ್.ಆರ್.ಜಿ ಸ್ಥಾನ ಪಡೆದಿದ್ದಾರೆ.

Artist Vignesh
ಯುವ ಕಲಾವಿದ ವಿಘ್ನೇಶ್.ಆರ್.ಜಿ

ಉಡುಪಿ: ಯುವ ಕಲಾವಿದ ವಿಘ್ನೇಶ್.ಆರ್.ಜಿ ಸದ್ದಿಲ್ಲದೆ ಸಾಧನೆಯೊಂದನ್ನು ಮಾಡಿದ್ದಾರೆ. ಚಿತ್ರಕಲೆಯಲ್ಲಿ ಎಲೆಮರೆ ಕಾಯಿಯಂತಿದ್ದ ಇವರು 2022ರಲ್ಲಿ ನಡೆದ ಇಂಟರ್‌ನ್ಯಾಷನಲ್ ಆರ್ಟ್ ಐಕಾನ್ ಸ್ಪರ್ಧೆಯ ಟಾಪ್ 100 ವಿಜೇತ ಸ್ಪರ್ಧಿಗಳಲ್ಲಿ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಉಡುಪಿಯ ಯುವ ಕಲಾವಿದ ವಿಘ್ನೇಶ್ ..

ಗುರುವಿಲ್ಲದ ಕಲಾವಿದ: ಉಡುಪಿಯ ಲಕ್ಷ್ಮೀ ನಗರದ ಪೂರ್ಣಿಮಾ ಮತ್ತು ರಾಘವೇಂದ್ರ ದಂಪತಿ ಪುತ್ರ ವಿಘ್ನೇಶ್. ಇವರು ಇಲ್ಲಿನ ಪೂರ್ಣಪ್ರಜ್ಞಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಲ್ಲೇ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಇವರು ಗುರುವಿಲ್ಲದ ಕಲಾವಿದ. ಕೇವಲ ಒಂದು ವರ್ಷ ಚಿತ್ರಕಲೆ ತರಬೇತಿ ಪಡೆದದ್ದು ಬಿಟ್ಟರೆ ಸ್ವತಃ ಯೂಟ್ಯೂಬ್ ನೋಡಿಯೇ ಕಲಿತವರು.

International Art Icon
ವಿಘ್ನೇಶ್ ಕೈಯಲ್ಲಿ ಅರಳಿದ ಚಿತ್ರಕಲೆ

ಅಕ್ರಿಲಿಕ್, ವಾಟರ್ ಕಲರ್, ಚಾರ್ಕೊಲ್, ಗ್ರಾಫೈಟ್ ಮತ್ತು ಆವೆ ಮಣ್ಣಿನ ಮಾಧ್ಯಮಗಳಲ್ಲಿ ಹಲವು ಚಿತ್ರಗಳನ್ನು ರಚಿಸಿದ್ದಾರೆ. ರೆಯಾನ್ಶ್ ರಾಹುಲ್ ಆರ್ಟ್ ಯೂನಿವರ್ಸಿಟಿ ಇತ್ತೀಚೆಗೆ ಆನ್‌ಲೈನ್ ಮೂಲಕ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಪೈಕಿ ವಿಘ್ನೇಶ್ ಟಾಪ್ 100 ಕಲಾವಿದರ ಪೈಕಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

International Art Icon
ವಿಘ್ನೇಶ್ ಕೈಯಲ್ಲಿ ಅರಳಿದ ಚಿತ್ರಕಲೆ

ಕಲೋತ್ಸವದಲ್ಲಿ ರಾಜ್ಯಕ್ಕೆ ಮೊದಲ ಬಹುಮಾನ‌: ಹೆತ್ತವರಾದ ಪೂರ್ಣಿಮಾ ಮತ್ತು ರಾಘವೇಂದ್ರ ಅವರ ಪ್ರೋತ್ಸಾಹವೂ ಈ ಸಾಧನೆಗೆ ಕಾರಣ. ಈ ಮೊದಲು ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ರಾಜ್ಯಕ್ಕೆ ಮೊದಲ ಬಹುಮಾನ‌ ಪಡೆದ ಹೆಗ್ಗಳಿಕೆಯೂ ಇವರದ್ದು.

International Art Icon
ವಿಘ್ನೇಶ್ ಕೈಯಲ್ಲಿ ಅರಳಿದ ಚಿತ್ರಕಲೆ

ಈತ ಅನಿಮೇಷನ್​ನಲ್ಲಿ ತುಂಬ ಆಸಕ್ತಿ ಹೊಂದಿದ್ದಾರೆ. ತಮ್ಮ ಮಗ ಚಿತ್ರಕಲೆಯಲ್ಲೇ ಉನ್ನತ ವಿದ್ಯಾಭ್ಯಾಸ ಮಾಡುವುದಿದ್ದರೆ ಅದಕ್ಕೆ ಸಂಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸುವುದಾಗಿ ತಾಯಿ ಪೂರ್ಣಿಮಾ ಹೇಳಿದ್ದಾರೆ.

International Art Icon
ವಿಘ್ನೇಶ್ ಕೈಯಲ್ಲಿ ಅರಳಿದ ಚಿತ್ರಕಲೆ

ಇದನ್ನೂ ಓದಿ: ಲಾಟಿ ಹಿಡಿಯುವ ಕೈಯಲ್ಲಿ ಅರಳಿದ ಚಿತ್ರಕಲೆ: ಜಾನಪದ ಕಲಾಪ್ರಕಾರಗಳಿಗೆ ಪ್ರಾಶಸ್ತ್ಯ

Last Updated : Nov 15, 2022, 11:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.