ಉಡುಪಿ: ಕೋಟೇಶ್ವರದ ಪುರಾಣ ಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಕೊಡಿಮರವನ್ನು ಇಂದು ರಾಷ್ಟ್ರೀಯ ಹೆದ್ದಾರಿ ಮೂಲಕ ತರಲಾಯಿತು.
ಸುಮಾರು 65 ವರ್ಷಗಳ ನಂತರ ದೇವಸ್ಥಾನದ ಕೊಡಿಮರವನ್ನು ಬದಲಿಸಲು ಸಂಕಲ್ಪಿಸಲಾಗಿದ್ದು, ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಿಂದ ಬೃಹತ್ ಕೊಡಿಮರವನ್ನು ಉಡುಪಿಗೆ ತರಲಾಯಿತು. 90 ಅಡಿ ಉದ್ದ ಮತ್ತು 645 ಮೀಟರ್ ಸುತ್ತಳತೆಯ ಈ ಬೃಹತ್ ಕೊಡಿಮರವನ್ನು ಭವ್ಯ ಮೆರವಣಿಗೆಯಲ್ಲಿ ಕೋಟೇಶ್ವರ ದೇವಸ್ಥಾನಕ್ಕೆ ಸಾಗಿಸಲಾಯಿತು.
ಆಕರ್ಷಕ ಚೆಂಡೆ ವಾದನ, ನಾದಸ್ವರ ವಾದನದ ಜೊತೆ ವಿಶೇಷ ಮೆರವಣಿಗೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಸಾಗಿಸಲಾಯಿತು.