ಉಡುಪಿ: ಯಾರೂ ಇಲ್ಲದ ವೇಳೆ ಮನೆ ಬೀಗ ಒಡೆದು ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬ್ರಹ್ಮಾವರ ಗ್ರಾಮದ ತೆಂಕುಬಿರ್ತಿಯಲ್ಲಿ ನಡೆದಿದೆ.
ಮಹಮ್ಮದ್ ಆಸೀಫ್ ಎಂಬವವರಿಗೆ ಸೇರಿದ ಮನೆ ಇದಾಗಿದೆ. ಆಸೀಫ್, ಕುಟುಂಬ ಸಮೇತರಾಗಿ ಮಸ್ಕತ್‌ನಲ್ಲಿದ್ದ ವೇಳೆ ಕಳ್ಳತನ ನಡೆದಿದೆ. ಮಸ್ಕತ್‌ಗೆ ತೆರಳುವ ವೇಳೆ ಆಸೀಫ್ ತನ್ನ ಮನೆಯ ಜವಾಬ್ದಾರಿಯನ್ನ ಝಿಯಾದ್ ಎಂಬರಿಗೆ ನೀಡಿದ್ರು. ಝಿಯಾದ್ ಮನೆಯ ಗಾರ್ಡನ್ ಏರಿಯಾ ನೋಡಿಕೊಳ್ಳಲು ನವೀನ್ ಎಂಬವರನ್ನ ಕೆಲಸಕ್ಕೆ ಸೇರಿಸಿದ್ರು. ಎಂದಿನಂತೆ ಸಂಜೆ ಗಾರ್ಡನ್ ಏರಿಯಾದಲ್ಲಿ ನೀರು ಬಿಟ್ಟು ಮನೆಗೆ ತೆರಳಿದಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನಲಾಗಿದೆ.
ಮರುದಿನ ನವೀನ್ ಕೆಲಸಕ್ಕೆ ಬಂದ ವೇಳೆ ಮನೆ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ನವೀನ್ ಮನೆ ಉಸ್ತುವಾರಿ ಝಿಯಾದ್ ಎಂಬವರಿಗೆ ಕರೆ ಮಾಡಿದಾಗ ನಗದು ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರ ತಂಡವೊಂದು ಕಾಂಪೌಂಡ್ ಹಾರಿ ಮನೆ ಮುಂಬಾಗಿಲಿನ ಬಾಗಿಲನ್ನು ಒಡೆದು ಸುಮಾರು 1ಲಕ್ಷ ನಗದು ಎರಡು ಚಿನ್ನದ ಬಳೆಗಳು, ನಾಲ್ಕು ಚಿನ್ನದ ಉಂಗುರ, ಒಂದು ಬ್ರಾಸ್ಲೈಟ್ ಸೇರಿ 1 ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.