ETV Bharat / state

ಉಡುಪಿ: ಪಡುಬಿದ್ರೆಯಲ್ಲಿ ಕಡಲ್ಕೊರೆತ ವೀಕ್ಷಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ... - Home Minister Bommai visits udupi

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉಡುಪಿ ಜಿಲ್ಲೆಯ ಕಡಲ್ಕೊರೆತ ಹಾಗೂ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದರು.

Home Minister Bommai
ಗೃಹ ಸಚಿವ ಬಸವರಾಜ್ ಬೊಮ್ಮಾಯಿ
author img

By

Published : Aug 11, 2020, 5:05 PM IST

ಉಡುಪಿ: ಜಿಲ್ಲೆಗೆ ಆಗಮಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜಿಲ್ಲೆಯ ಕಡಲ್ಕೊರೆತ ಹಾಗೂ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದರು.

ಪಡುಬಿದ್ರೆಯಲ್ಲಿ ಕಡಲ್ಕೊರೆತ ವೀಕ್ಷಣೆ ವೇಳೆ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಪ್ರಧಾನಮಂತ್ರಿ ಜೊತೆ ರಾಜ್ಯದ ನೆರೆ ಪರಿಸ್ಥಿತಿ ಕುರಿತು ಸೋಮವಾರ ಚರ್ಚಿಸಿದ್ದೇವೆ. ರಾಜ್ಯದ ಎರಡು ಪ್ರಮುಖ ಸಮಸ್ಯೆಯ ಕುರಿತು ಪ್ರಧಾನಿ ಜೊತೆ ಮಾತನಾಡಿದ್ದೇವೆ. ಕಡಲ್ಕೊರೆತಕ್ಕೆ ‌ಶಾಶ್ವತ ಪರಿಹಾರದ ಬಗ್ಗೆ ಚರ್ಚೆ ನಡೆದಿದೆ. ಎಡಿಬಿ ನೆರೆವಿನೊಂದಿಗೆ ಶಾಶ್ವತ ಪರಿಹಾರದ ಬಗ್ಗೆ ಮಾತನಾಡಿದ್ದೇನೆ. ಕಡಲ್ಕೊರೆತ ನಿಯಂತ್ರಣಕ್ಕೆ ಹೆಚ್ಚಿನ ಅನುದಾನ ನೀಡಲು ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿದರು.

ಕಡಲ್ಕೊರೆತ ಹಾಗೂ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಗೃಹ ಸಚಿವ

ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಆಗುವ ಸೂಕ್ಷ್ಮ ಪ್ರದೇಶಗಳ‌ ಬಗ್ಗೆ ಸರ್ವೇ‌ ಮಾಡಬೇಕು. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಮೂಲಕ ಸರ್ವೇ ‌ಮಾಡಬೇಕು. ಸರ್ವೇಯ ಜೊತೆಗೆ ಮ್ಯಾಪಿಂಗ್ ಕೂಡಾ ‌ಮಾಡಿಸಬೇಕು. ಭೂಕುಸಿತ ತಡೆ ಹಾಗೂ ಶಾಶ್ವತ ಪುನರ್ವಸತಿ ‌ಕುರಿತು ಚರ್ಚಿಸಿದ್ದೇವೆ. ಉಡುಪಿ ಜಿಲ್ಲೆಗೆ ಎನ್​ಡಿಆರ್​ಎಫ್ ಮೂಲಕ 10 ಕೋಟಿ ಬಿಡುಗಡೆ ಮಾಡುತ್ತೇನೆ. ಈ ಪರಿಹಾರದ ಹಣವನ್ನು ರಕ್ಷಣೆ ಹಾಗೂ ಪುನರ್ವಸತಿಗೆ ಬಳಕೆ ಮಾಡಲಾಗುವುದು‌ ಎಂದರು.

ಕೊರೊನಾ ನಡುವೆ ಸ್ವಾತಂತ್ರ್ಯ ದಿನಾಚರಣೆ‌ ವಿಚಾರವಾಗಿ ಮಾತನಾಡಿದ ಅವರು, ಸ್ವಾತಂತ್ರ್ಯ ದಿನ ಆಚರಿಸುವ ಕುರಿತು ಕೇಂದ್ರದ ಗೈಡ್‌ ಲೈನ್ ಬಂದಿದೆ. ಸ್ವಾತಂತ್ರ್ಯ ‌ದಿನದಂದು ಕಮಾಂಡರ್ಸ್ ಇರ್ತಾರೆ ಆದ್ರೆ ಪರೇಡ್ ಇರಲ್ಲ. ಪರೇಡ್ ಇಲ್ಲ ಸೆಲ್ಯೂಟ್ ಇಲ್ಲ ನಿಯಮಾವಳಿ ಪ್ರಕಾರ ಆಚರಣೆ ಮಾಡಲಾಗುವುದು ಎಂದರು.

ಕೊರೊನಾ ಆತಂಕದ‌ ನಡುವೆ ನೆರೆ ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ಮಾತನಾಡಿದ ಸಚಿವರು, ಒಂದು ಕಡೆ ಕೊರೊನಾ ಒಂದು ಕಡೆ ನೆರೆ ನಿಯಂತ್ರಿಸೋ‌ದು ಸವಾಲಾಗಿದೆ, ಫ್ಲಡ್ ರಿಲೀಫ್, ಕೊರೊನಾ ನಿಯಮ ಮೀರಿ‌ ಮಾಡಲಾಗುವುದಿಲ್ಲ. ಇವತ್ತು ‌ರಾಜ್ಯ ಸಚಿವರ ಜೊತೆ ಪ್ರಧಾನಿ ವೀಡಿಯೋ ಕಾನ್ಫರೆನ್ಸ್ ‌ಇದೆ. ಗಂಜಿ ಕೇಂದ್ರದಲ್ಲಿ ಕೊರೊನಾ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.