ETV Bharat / state

ಗುರು-ಶನಿ ಸಮಾಗಮ : ಇಂದು ಸಂಜೆ ಆಗಸದಲ್ಲಿ ಕೌತುಕ - Jupiter

ಗುರು-ಶನಿ ಗ್ರಹಗಳ ಅಪೂರ್ವ ಸಮಾಗಮ ಇಂದು ನಡೆಯಲಿದ್ದು, ಸಂಜೆ 6.15 ರಿಂದ 8 ರವರೆಗೆ ಗುರು ಮತ್ತು ಶನಿ ಗ್ರಹಗಳ ಸಾಮೀಪ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Great conjunction
ಗುರು-ಶನಿ
author img

By

Published : Dec 21, 2020, 1:50 PM IST

ಉಡುಪಿ: 20 ವರ್ಷಗಳಿಗೊಮ್ಮೆ ಗೋಚರಿಸುವ ಗುರು ಮತ್ತು ಶನಿಯ ಅಪರೂಪದ ಜೋಡಿಯ ಸುಂದರ ಸಮಾಗಮ ಇಂದು ಸಂಜೆ ಗೋಚರಿಸಲಿದೆ. ಸಂಜೆ 6.15 ರಿಂದ 8 ರವರೆಗೆ ಗುರು ಮತ್ತು ಶನಿ ಗ್ರಹಗಳ ಸಾಮೀಪ್ಯವನ್ನು ಕಣ್ತುಂಬಿಕೊಳ್ಳಬಹುದು.

ಗುರು ಹಾಗು ಶನಿಯ ಸಾಮೀಪ್ಯವನ್ನು ಒಂದು ವಿಶೇಷವಾದ ಖಗೋಳ ವಿದ್ಯಮಾನ ಎನ್ನಬಹುದಾಗಿದ್ದು, ಇದನ್ನು ಗ್ರೇಟ್ ಕಂಜಂಕ್ಷನ್ ಎನ್ನಲಾಗುತ್ತದೆ. ಭೂಮಿಯಿಂದ ಸೂರ್ಯನಿಗಿರುವ ದೂರದ 5ರಷ್ಟು ದೂರದಲ್ಲಿ ಗುರುಗ್ರಹವಿದ್ದು, ಗುರುವು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷ ಬೇಕು. ಶನಿಯು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ 2ರಷ್ಟು ದೂರದಲ್ಲಿದ್ದು, ಪರಿಭ್ರಮಿಸಲು 29.46 ವರ್ಷಗಳು ಬೇಕು. ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜು ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ಹೇಳಿದ್ದಾರೆ.

ಗುರು-ಶನಿ ಸಮಾಗಮ

ಗುರು ಹಾಗೂ ಶನಿ ಗ್ರಹಗಳು ಒಂದೇ ಸಮತಲದಲ್ಲಿ ಪರಿಭ್ರಮಿಸುವುದಿಲ್ಲ. ಪ್ರತಿ ಸಮಾಗಮದಲ್ಲಿ ಅಂತರವು ಬದಲಾಗುತ್ತಿರುತ್ತದೆ. ಖಗೋಳಶಾಸ್ತ್ರದಲ್ಲಿ ಈ ಅಂತರಗಳನ್ನು ಕೋನಾಂತರದಲ್ಲಿ ಅಳೆಯಲಾಗುತ್ತದೆ. ಮದುವೆ ಸಮಾರಂಭಗಳಲ್ಲಿ ವರನು ವಧುವಿಗೆ ಅರುಂಧತಿ ಹಾಗು ವಸಿಷ್ಠ ನಕ್ಷತ್ರಗಳನ್ನು ತೋರಿಸುವ ಶಾಸ್ತ್ರವಿದೆ. ಅಲ್ಲಿ ಎರಡು ನಕ್ಷತ್ರಗಳು ತುಂಬ ಹತ್ತಿರದಲ್ಲಿ ಜೋಡಿ ನಕ್ಷತ್ರಗಳಂತೆ ಕಾಣುತ್ತದೆ. ಇವುಗಳ ನಡುವಿನ ಅಂತರ 0.2 ಡಿಗ್ರಿಗಳಿರುತ್ತದೆ. ಆದರೆ, ಈಗ ಕಾಣುವ ಗುರು ಶನಿ ಗ್ರಹದ ನಡುವಿನ ಅಂತರ ಅರುಂಧತಿ ಹಾಗೂ ವಸಿಷ್ಠ ನಕ್ಷತ್ರಗಳ ಅಂತರದ ಅರ್ಧದಷ್ಟಿರುತ್ತದೆ (0.1) ಎಂದು ಖಗೋಳಶಾಸ್ತ್ರಜ್ಞ ಡಾ. ‌ಎ ಪಿ ಭಟ್ ಮಾಹಿತಿ ನೀಡಿದ್ದಾರೆ.

2040ರಲ್ಲಿ ಈ ಸಮಾಗಮವನ್ನು ಮತ್ತೊಮ್ಮೆ ವೀಕ್ಷಿಸಬಹುದಾಗಿದ್ದರೂ ಅಂತರ ಎರಡರಷ್ಟಿರುತ್ತದೆ. ಹಾಗಾಗಿ, ಈಗ ನೋಡದಿದ್ದರೆ ಮತ್ತೊಮ್ಮೆ, 0.1 ಡಿಗ್ರಿ ಅಂತರವಿರುವ ಸಮಾಗಮವನ್ನು ವೀಕ್ಷಿಸಲು ಮಾರ್ಚ್ 2080ರವರೆಗೆ ಕಾಯಬೇಕು. ಹಿಂದೆ, 1623ರಲ್ಲಿ ಇದೇ ರೀತಿಯ ವಿದ್ಯಮಾನ ನಡೆದಿತ್ತು. ಅದಕ್ಕಿಂತ ಹಿಂದೆ 1226 ರಲ್ಲಿ ಕಂಡಿತ್ತು.

ಈ ಜೋಡಿ ಗ್ರಹಗಳು ಕೇವಲ 1 ಗಂಟೆ 45 ನಿಮಿಷ ಮಾತ್ರ ಕಾಣ ಸಿಗುತ್ತದೆ. ಎರಡು ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8ಗಂಟೆಯವರೆಗೆ ಕಾಣಲಿದ್ದು, ನಂತರ ನೈರುತ್ಯದಲ್ಲಿ ಅಸ್ತವಾಗುತ್ತದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ 21ರಂದು ಸಂಜೆ 6ಗಂಟೆಗೆ ಈ ಗ್ರಹಗಳ ವೀಕ್ಷಣೆ ಆಯೋಜಿಸಲಾಗಿದೆ. ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಯುಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರ ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.

ಓದಿ...ಭಾರತದಲ್ಲಿ ಬೌದ್ಧ ಸಾಹಿತ್ಯ ಮತ್ತು ಗ್ರಂಥಗಳ ಲೈಬ್ರರಿ ನಿರ್ಮಾಣವಾಗಲಿದೆ: ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.