ಉಡುಪಿ: ಮನೆಯೊಂದರ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಸೌಕೂರು ದೇವಸ್ಥಾನ ಬಳಿಯ ಅಶೋಕ್ ಎಂಬುವರ ಬಾವಿಗೆ ಹಗಲು ಹೊತ್ತಲ್ಲಿ ಈ ಚಿರತೆ ಬಿದ್ದಿತ್ತು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು 30 ಅಡಿ ಆಳದ ಬಾವಿಯಿಂದ ಬುಟ್ಟಿ ಮತ್ತು ಬೋನು ಬಳಸಿ ಉಪಾಯವಾಗಿ ಚಿರತೆಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.