ETV Bharat / state

ಉಡುಪಿ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ; 8 ಮೀನುಗಾರರ ರಕ್ಷಣೆ - ಆಳಸಮುದ್ರದಲ್ಲಿ ದೋಣಿ ಮುಳುಗಡೆ

ಮೀನುಗಾರಿಕೆಗೆ ತೆರಳಿದ್ದ ದೋಣಿ ಆಳಸಮುದ್ರದಲ್ಲಿ ಮುಳುಗಿದ್ದು, ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

Eight fishermen rescued as boat capsizes mid-sea

author img

By ETV Bharat Karnataka Team

Published : Dec 22, 2023, 8:18 PM IST

Updated : Dec 23, 2023, 9:58 AM IST

ಉಡುಪಿ: 8 ಮೀನುಗಾರರ ರಕ್ಷಣೆ

ಉಡುಪಿ: ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮುಳುಗಡೆಯಾಗಿದ್ದು, ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಬೇರೆ ಬೋಟ್​ನವರು ರಕ್ಷಿಸಿದ್ದಾರೆ. ಕಡೆಕಾರು ರಕ್ಷಣಾ ಸಂಸ್ಥೆಯ ಶ್ರೀನಾರಾಯಣ ಎಂಬ ಬೋಟ್ ಡಿಸೆಂಬರ್​ 12ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಡಿಸೆಂಬರ್ 19ರಂದು ಬೆಳಿಗ್ಗೆ ಸಮುದ್ರದಲ್ಲಿ ಮಲ್ಪೆಯಿಂದ 26 ಮಾರು ಆಳದಲ್ಲಿ ದೋಣಿ ಮುಳುಗಿದೆ. ಡಿಸೆಂಬರ್ 19ರ ಬೆಳಿಗ್ಗೆ 6.30ರ ಸುಮಾರಿಗೆ ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿನಡಿಯಲ್ಲಿ ಯಾವುದೋ ವಸ್ತು ದೋಣಿಯ ತಳ ಒಡೆದು ನೀರು ನುಗ್ಗಲು ಆರಂಭಿಸಿದೆ. ಸಿಬ್ಬಂದಿ ಕೂಡಲೇ ವೈರ್​ಲೆಸ್ ಸಂಪರ್ಕ ಬಳಸಿ ಇತರೆ ಬೋಟ್​​ಗಳಿಗೆ ಸಂದೇಶ ರವಾನಿಸಿದ್ದರು.

ಈ ವೇಳೆ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಶ್ರೀ ಮೂಕಾಂಬಿಕಾ ಅನುಗ್ರಹ ಬೋಟಿನವನರು ಧಾವಿಸಿ, ಮುಳುಗುತ್ತಿರುವ ದೋಣಿಯನ್ನು ಉಳಿಸುವ ಪ್ರಯತ್ನ ಮಾಡಿದರು. ಆದರೆ, ನೀರಿನ ಅಬ್ಬರ ಜಾಸ್ತಿಯಾಗಿದ್ದರಿಂದ ಪ್ರಯತ್ನ ವ್ಯರ್ಥವಾಗಿದೆ. 8 ಗಂಟೆ ವೇಳೆಗೆ ದೋಣಿ ಸಂಪೂರ್ಣ ಮುಳುಗಡೆಯಾಗಿತ್ತು. ಹೀಗಿದ್ದೂ ಮೂಕಾಂಬಿಕಾ ದೋಣಿಯ ಮೂಲಕ ಮೀನುಗಾರರನ್ನು ಮರಳಿ ದಡಕ್ಕೆ ಕರೆತರಲಾಗಿದೆ.

ಇದನ್ನೂ ಓದಿ: ಕಡಲಮಕ್ಕಳಿಗೆ ನೆರವು: ಮೀನುಗಾರರಿಗೆ ಆರೋಗ್ಯ ಸಮಸ್ಯೆಯಾದರೆ ಬರುತ್ತೆ ಬೋಟ್ ಆಂಬ್ಯುಲೆನ್ಸ್

Last Updated : Dec 23, 2023, 9:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.