ಉಡುಪಿ: ಆಟವಾಡುತ್ತಿದ್ದ ಮಕ್ಕಳ ಮೇಲೆ ಶ್ವಾನ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಕಂಡ್ಲೂರು ಸೇತುವೆ ಬಳಿಯ ತೊಪ್ಲು ಎಂಬಲ್ಲಿ ಮನೆಯ ಬಳಿ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ನಾಲ್ಕೈದು ಶ್ವಾನಗಳು ದಾಳಿ ಮಾಡಿವೆ. ಈ ಸಂದರ್ಭ ಶ್ವಾನ ದಾಳಿಯಿಂದ ಮಕ್ಕಳನ್ನು ತಪ್ಪಿಸಲು ಯತ್ನಿಸಿದ ಮಹಿಳೆಯ ಮೇಲೂ ನಾಯಿಗಳು ದಾಳಿ ಮಾಡಿವೆ. ದಾಳಿಯಿಂದ ಆದ್ವಿತ್(4), ಆಯೇಜಾ(3) ಹಾಗೂ ಕನಕ ಪೂಜಾರ್ತಿ(45) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರದೇಶದಲ್ಲಿ ಶ್ವಾನಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.