ಉಡುಪಿ : ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಜಿಲ್ಲೆಯ ನಾಗ ದೇವಾಲಯಗಳಲ್ಲಿ ವಿಶೇಷ ರೀತಿಯಲ್ಲಿ ನಾಗರಾಧನೆ ನಡೆಯುತ್ತಿದೆ.
ಈ ಹಿಂದಿನ ವರ್ಷಗಳಲ್ಲಿ ಷಷ್ಠಿಯಂದು ಮಡೆಸ್ನಾನ ನಡೆಸಲಾಗುತ್ತಿತ್ತು. ಈ ಬಗ್ಗೆ ವಿವಾದ ತಲೆದೋರಿದ ಹಿನ್ನೆಲೆ, ಪೇಜಾವರ ಮಠದ ವಿಶ್ವೇಶ ತೀರ್ಥರು ಎಡೆ ಸ್ನಾನ ನಡೆಸಲು ಸಲಹೆ ನೀಡಿದ್ದರು. ಹೀಗಾಗಿ, ಎಂಜಲೆಲೆಯ ಮೇಲೆ ಉರುಳು ಸೇವೆ ನಡೆಸುವುದಕ್ಕೆ ಬದಲಾಗಿ ದೇವರ ಪ್ರಸಾದವನ್ನು ಇಟ್ಟು, ಅದರ ಮೇಲೆ ಉರುಳು ಸೇವೆ ನಡೆಸುವ ಸಂಪ್ರದಾಯ ಚಾಲ್ತಿಗೆ ಬಂತು.
ಓದಿ: ಕರಾವಳಿಯಲ್ಲಿ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ ; ವೈಭವದ ಪೂಜೆ- ಪುನಸ್ಕಾರ
ಪೇಜಾವರ ಶ್ರೀಗಳ ಕಾಲಾನಂತರ ಎಡೆಸ್ನಾನ ಸಂಪ್ರದಾಯವನ್ನು ಮುಂದುವರಿಸಲಾಗಿದೆ. ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಮುಚ್ಲಗೋಡು ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಎಡೆಸ್ನಾನ ನಡೆಯಿತು. ಹರಕೆ ಹೊತ್ತಿದ್ದ ಆರು ಮಂದಿ ಭಕ್ತರು ದೇವರ ಪ್ರಸಾದದ ಮೇಲೆ ಉರುಳು ಸೇವೆ ನಡೆಸಿ ಹರಕೆ ತೀರಿಸಿದರು.