ಉಡುಪಿ: ಬಾರ್ಕೂರು ಹಾಲೆಕೊಡಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ನಡೆದಿದೆ.
ಬಾರ್ಕೂರು ಹೊಸಾಳ ಗ್ರಾಮದ ಹರ್ಷ (25), ಕಾರ್ತಿಕ್ (21) ಮೃತರು. ನಿನ್ನೆ ರಾತ್ರಿ ನದಿಯಲ್ಲಿ ಬಲೆ ಬೀಸಿ ಹೋಗಿದ್ದ ಯುವಕರು ಇಂದು ಬೆಳಗ್ಗೆ ಬಲೆಯನ್ನು ಎಳೆಯುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತ ಹರ್ಷ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ರಿಕವರಿ ಕೆಲಸ ಮಾಡಿಕೊಂಡಿದ್ದ. ಕಾರ್ತಿಕ್ ಕೊನೆಯ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದಾನೆ. ಘಟನೆ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.