ETV Bharat / state

SSLC ಪರೀಕ್ಷೆ: ದ್ವೀಪದಲ್ಲಿದ್ದ ವಿದ್ಯಾರ್ಥಿನಿಯರು... ದೋಣಿಯಲ್ಲಿ ಕರೆತಂದ DDPI, ತಹಶೀಲ್ದಾರ್ - ಡಿಡಿಪಿಐ, ತಹಶೀಲ್ದಾರ್

ನದಿ ದಾಟಿ ಬರಲಾಗದೆ SSLC ಪರೀಕ್ಷೆ ತಪ್ಪಿಸಿಕೊಳ್ಳುಬ ಭೀತಿಯಲ್ಲಿದ್ದ ವಿದ್ಯಾರ್ಥಿನಿಯರನ್ನು ದೋಣಿ ಮೂಲಕ ಕರೆ ತಂದು ಪರೀಕ್ಷೆ ಬರೆಸಿದ್ದಾರೆ.

sslc
sslc
author img

By

Published : Jul 23, 2021, 3:30 AM IST

ಉಡುಪಿ: SSLC ಪರೀಕ್ಷೆ ತಪ್ಪಿಸಿಕೊಳ್ಳಲಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಡಿಡಿಪಿಐ ಹಾಗೂ ಬೈಂದೂರು ತಹಶೀಲ್ದಾರ್ ಅವರು ದೋಣಿ ಮೂಲಕ ಸೌಪರ್ಣಿಕೆ ನದಿ ದಾಟಿಸಿ ಪರೀಕ್ಷಾ ಕೇಂದ್ರಕ್ಕೆ ಕರೆ ತಂದಿದ್ದಾರೆ.

ಬೈಂದೂರು ವಲಯದ ಮರವಂತೆ ಸರ್ಕಾರಿ ಪ್ರೌಢ ಶಾಲೆಯ ಶಿಲ್ಪಾ ಹಾಗೂ ಸಂಜನಾ ಅವರ ಮನೆ ಕರು ದ್ವೀಪದಲ್ಲಿದ್ದು, ಅಲ್ಲಿಂದ ಊರಿಂದಾಚೆಗೆ ಬರಬೇಕೆಂದರೆ ಮರವಂತೆ, ಇಲ್ಲವಾದರೆ ನಾಡಾ ಮೂಲಕ ಸಾಗಿ ಬರಬೇಕಾಗುತ್ತದೆ.

ದೋಣಿ ಮೂಲಕ ಸಾಗಿ ಬಂದರೂ ಇಲ್ಲಿನ ವಿದ್ಯಾರ್ಥಿಗಳು ಬಯಲು ದಾರಿಯಲ್ಲಿ ಮತ್ತೆ ಅರ್ಧ ಕಿ.ಮೀ ಗೂ ಹೆಚ್ಚು ನಡೆದುಕೊಂಡೆ ಕ್ರಮಿಸಿಬೇಕು. ನಿರಂತರ ಸುರಿದ ಭಾರೀ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿತ್ತು. ಇದರಿಂದಾಗಿ ಪರೀಕ್ಷೆಗೆ ಬರಲು ಈ ವಿದ್ಯಾರ್ಥಿನಿಯರಿಗೆ ಸಮಸ್ಯೆಯಾಗಿತ್ತು. ಇದು ಪರೀಕ್ಷೆಯ ನೋಡಲ್ ಅಧಿಕಾರಿ ಕರುಣಾಕರ ಶೆಟ್ಟಿ ಅವರ ಗಮನಕ್ಕೆ ಬಂದಿದ್ದು, ತಕ್ಷಣವೇ ಮಕ್ಕಳನ್ನು ಕರೆತರಲು ಎಲ್ಲಾ ವ್ಯವಸ್ಥೆಗಳನ್ನು ಶಿಕ್ಷಣ ಇಲಾಖೆ ಮಾಡಿದೆ.

ದ್ವೀಪದಲ್ಲಿದ್ದ ವಿದ್ಯಾರ್ಥಿನಿಯರು... ದೋಣಿಯಲ್ಲಿ ಕರೆತಂದ DDPI, ತಹಶೀಲ್ದಾರ್

ಇಬ್ಬರು ಶಿಕ್ಷಕರನ್ನು ನಿಯೋಜಿಸಿ ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆ. ವಿಶೇಷ ಕಾಳಜಿಯೊಂದಿಗೆ ಖುದ್ದು ಡಿಡಿಪಿಐ ಹೆಚ್.ಎನ್ ನಾಗೂರ ಹಾಗೂ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಸ್ವತಃ ದೋಣಿ ಮೇಲೇರಿ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ.

ಡಿಡಿಪಿಐ ಹಾಗೂ ಬೈಂದೂರು ತಹಶೀಲ್ದಾರ್ ಮರವಂತೆ ಹೆದ್ದಾರಿಯಿಂದ ಅರ್ಧ ಕಿ.ಮೀ ಬಯಲು ದಾರಿಯಲ್ಲಿ ನಡೆದು ಆ ಬಳಿಕ ದೋಣಿ ಮೂಲಕ ಕುರುವಿಗೆ ಪ್ರಯಾಣ ಬೆಳೆಸಿ ಮತ್ತೆ ಅದೇ ದೋಣಿಯಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಬಿಟ್ಟು ಗಮನ ಸೆಳೆದಿದ್ದಾರೆ. ಮಕ್ಕಳ ಬಗೆಗಿನ ಶಿಕ್ಷಣ ಇಲಾಖೆಯ ಈ ಕಾಳಜಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

(SSLC ಪರೀಕ್ಷೆ: ಮೊದಲ ಪತ್ರಿಕೆಯ ಕೀ ಉತ್ತರ ರಿಲೀಸ್​, ನಿಮ್ಮ ಅಂಕ ಪರೀಕ್ಷಿಸಿಕೊಳ್ಳಿ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.