ಉಡುಪಿ: ಯುಕ್ರೇನ್ನಿಂದ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿ ರೋಹನ್ ಅವರ ಮನೆಗೆ ಜಿಲ್ಲಾಧಿಕಾರಿ ಕೂರ್ಮ ರಾವ್ ಭೇಟಿ ನೀಡಿದರು.
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ವಿದ್ಯಾರ್ಥಿಯ ತಂದೆ ಕೃಷಿ ವಿಜ್ಞಾನಿ ಡಾ.ಧನಂಜಯ್ ಅವರ ಜತೆ ಮಾತುಕತೆ ನಡೆಸಿದರು. ಇದೇ ವೇಳೆ, ವಿದ್ಯಾರ್ಥಿಗೆ ಸ್ಮರಣಿಕೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ರೋಹನ್ ಜತೆ ಮಾತನಾಡಿ ವಿವರ ಪಡೆದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮವನ್ನು ಅವರು ಶ್ಲಾಘಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಇದೇ ರೀತಿ ಸುರಕ್ಷಿತವಾಗಿ ಬರಬೇಕು ಎಂದು ಹಾರೈಸಿದರು.
ಉಡುಪಿ ಜಿಲ್ಲೆಯ ಒಟ್ಟು 7 ಮಂದಿ ಯುಕ್ರೇನ್ನಲ್ಲಿ ಸಿಲುಕಿದ್ದರು. ಇವರ ಪೈಕಿ 5 ಮಂದಿ ಮರಳಿದ್ದಾರೆ. ಉಳಿದಿರುವ ಇಬ್ಬರ ಪೈಕಿ ಓರ್ವ ವಿದ್ಯಾರ್ಥಿನಿ ಗಡಿ ಪ್ರದೇಶ ತಲುಪಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಖಾರ್ಕಿವ್ ಪಟ್ಟಣದ ಹೊರವಲಯದ ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಉಕ್ರೇನ್ನಿಂದ ಸುರಕ್ಷಿತವಾಗಿ ವಾಪಸಾದ ಹಾಸನದ ವೈದ್ಯಕೀಯ ವಿದ್ಯಾರ್ಥಿ