ಉಡುಪಿ: ಕೃಷ್ಣಮಠದಲ್ಲಿ ಸಾಂಕೇತಿಕ ಮುದ್ರಾಧಾರಣೆ ನಡೆಯಿತು. ಕೊರೊನಾದಿಂದ ಸಾಂಪ್ರದಾಯಿಕ ಆಚರಣೆಗೆ ಕುತ್ತು ಬಂದಿದ್ದು, ಇದೇ ಮೊದಲ ಬಾರಿಗೆ ಭಕ್ತರಿಗೆ ಮುದ್ರಾಧಾರಣೆ ರದ್ದಾಗಿದೆ. ಕೇವಲ ಯತಿಗಳಿಗೆ ಮಾತ್ರ ಮಠದಲ್ಲಿ ಮುದ್ರಾಧಾರಣೆ ನಡೆಯಿತು.
ಪ್ರಥಮ ಏಕಾದಶಿಯಂದು ಮಾಧ್ವ ಸಂಪ್ರದಾಯದಲ್ಲಿ ನಡೆಯುವ ಆಚರಣೆ ಇದಾಗಿದೆ. ಯತಿಗಳಿಂದ ಮುದ್ರೆ ಹಾಕಿಸಿಕೊಳ್ಳಲು ಭಕ್ತರು ಮುಗಿಬೀಳುತ್ತಿದ್ದರು.
ಈ ವರ್ಷ ಭಕ್ತರಿಗೆ ಮುದ್ರಾಧಾರಣೆ ಇಲ್ಲ. ಹೋಮ-ಹವನ ನಡೆಸಿ ಪರಸ್ಪರ ಮುದ್ರೆ ಹಾಕಿಸಿಕೊಂಡ ಅಷ್ಟಮಠಾಧೀಶರಲ್ಲಿ ಪರ್ಯಾಯ ಅದಮಾರು, ಪಲಿಮಾರು, ಕಾಣಿಯೂರು ಮಠಾಧೀಶರು ಭಾಗಿಯಾಗಿದ್ದರು. ಚಾತುರ್ಮಾಸ್ಯ ಅವಧಿಯಲ್ಲಿ ಮತ್ತೊಂದು ಶುಭದಿನದಂದು ಭಕ್ತಿಗೆ ಮುದ್ರೆ ಇದಾಗಿದೆ. ಲಾಕ್ಡೌನ್ ಆದಾಗಿನಿಂದಲೂ ಮುಚ್ಚಿಯೇ ಇರುವ ಕೃಷ್ಣ ಮಠದಲ್ಲಿ ಮುದ್ರಾದಾರಣೆಗೂ ಚ್ಯುತಿ ಬಂದಿದೆ.