ಉಡುಪಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ದೇಶದ ಪುಣ್ಯ ಕ್ಷೇತ್ರಗಳ ಮಣ್ಣು ಸಂಗ್ರಹಕ್ಕೆ ಚಾಲನೆ ಸಿಕ್ಕಿದೆ.
ವಿಶ್ವ ಹಿಂದೂ ಪರಿಷತ್ ನಿಂದ ದೇಶಾದ್ಯಂತ ಪವಿತ್ರ ನದಿಗಳ ನೀರು ಮತ್ತು ಮಣ್ಣು ಸಂಗ್ರಹ ಪ್ರಕ್ರಿಯೆಗೆ ಉಡುಪಿಯಲ್ಲಿ ಚಾಲನೆ ಸಿಕ್ಕಿದೆ.
ಉಡುಪಿಯ ಪವಿತ್ರ ಮಣ್ಣಿಗೆ ಅದಮಾರು ಪರ್ಯಾಯ ಈಶ ಪ್ರಿಯ ಶ್ರೀಗಳಿಂದ ಪೂಜೆ ನೆರವೇರಿಸಿ ಕೃಷ್ಣನ ಗಂಧ ಪ್ರಸಾದ ಅರ್ಪಿಸಿ ಪ್ರಾರ್ಥಿಸಿ ರಾಮಮಂದಿರ ನಿರ್ಮಾಣ ನಿರ್ವಿಘ್ನವಾಗಲಿ ಎಂದು ಪ್ರಾರ್ಥಿಸಲಾಯಿತು.
ಆಗಸ್ಟ್ 5ಕ್ಕೆ ಮಂದಿರ ಶಿಲಾನ್ಯಾಸ ವೇಳೆ ಈ ಮಣ್ಣು ಬಳಕೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ರಾಮಮಂದಿರ ಶಿಲಾನ್ಯಾಸ ಸಂದರ್ಭ ಪವಿತ್ರ ಮಣ್ಣನ್ನು ವಿಶ್ವ ಹಿಂದೂ ಪರಿಷತ್ ಮುಖಂಡರಿಗೆ ಹಸ್ತಾಂತರ ಮಾಡೋ ಪ್ರಕ್ರಿಯೆ ನಡೆಯಲಿದೆ.