ETV Bharat / state

ಮಠಗಳಿಂದ ಕಮಿಷನ್ ಪಡೆದ ಆರೋಪ: ದಿಂಗಾಲೇಶ್ವರ ‌ಶ್ರೀಗೆ ತಿರುಗೇಟು ನೀಡಿದ ಪಲಿಮಾರು ಶ್ರೀ - Palimaru Sri who gave tong to the Dingaleshwara Shri

ಈಗಿನ ಬೊಮ್ಮಾಯಿ ಸರ್ಕಾರ ದೇವಾಲಯಗಳ ಸಂಪತ್ತು ಬಡ ದೇವಾಲಯ ಮಠ ಮಂದಿರಗಳಿಗೆ ತಲುಪಿಸುವ ಕಾಳಜಿ ಇಟ್ಟುಕೊಂಡಿದೆ. ಶಾಸಕರು, ಮಂತ್ರಿಗಳು ಹಾಗೂ ಮುಜರಾಯಿ ವ್ಯವಸ್ಥೆ ಯಾವುದರಲ್ಲೂ ಸ್ವಾರ್ಥ ಧೋರಣೆ ಕಂಡುಬಂದಿಲ್ಲ ಎಂದು ಹೇಳುವ ಮೂಲಕ ದಿಂಗಾಲೇಶ್ವರ ‌ಶ್ರೀಗಳಿಗೆ ಪಲಿಮಾರು ಶ್ರೀ ತಿರುಗೇಟು ನೀಡಿದ್ದಾರೆ.

Palimaru Sri
ಉಡುಪಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ
author img

By

Published : Apr 19, 2022, 9:37 PM IST

Updated : Apr 19, 2022, 10:11 PM IST

ಉಡುಪಿ: ಉಡುಪಿ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಕಮಿಷನ್ ಆರೋಪದ ಬಗ್ಗೆ ಮಾತನಾಡಿ, ದೇಶದಲ್ಲಿ ದೇವಾಲಯಗಳ‌ ಸಂಖ್ಯೆ ಕಡಿಮೆಯೇನಿಲ್ಲ. ದೇವಾಲಯದ ಸಂಪಾದನೆಯೂ ಅಲ್ಪ ಅನ್ನೋ ಹಾಗಿಲ್ಲ. ಎ ಗ್ರೇಡ್ ದೇವಾಲಯಗಳಿಂದ ಬರುವ ಸಂಪತ್ತು ಸದ್ವಿನಿಯೋಗವಾಗಬೇಕು. ಹಿಂದಿನ ಸರ್ಕಾರದ ಕಾಲದಲ್ಲಿ ಆ ಸಂಪತ್ತು ಎಲ್ಲೆಲ್ಲೋ ಹೋಗುತ್ತಿತ್ತು ಎಂದಿದ್ದಾರೆ.

ದಿಂಗಾಲೇಶ್ವರ ‌ಶ್ರೀಗೆ ತಿರುಗೇಟು ನೀಡಿದ ಪಲಿಮಾರು ಶ್ರೀ

ಬಡ ದೇವಾಲಯ ಹಾಗೂ ಮಠ ಮಂದಿರಗಳಿಗೆ ಸಮಸ್ಯೆಯಾದಾಗ ಈ ದೇವಾಲಯಗಳ ಸಂಪತ್ತು ಮುಟ್ಟಿಸಬೇಕು. ಈಗಿನ ಬೊಮ್ಮಾಯಿ ಸರ್ಕಾರ ದೇವಾಲಯಗಳ ಸಂಪತ್ತು ಬಡ ದೇವಾಲಯ ಮಠ ಮಂದಿರಗಳಿಗೆ ತಲುಪಿಸುವ ಕಾಳಜಿ ಇಟ್ಟುಕೊಂಡಿದೆ. ಕಾಶಿಯಾತ್ರೆ ಮಾಡುವವರಿಗೂ ಧನಸಹಾಯ ನೀಡುತ್ತಿರುವುದು ನಿಜವಾಗಿ ಅಭಿನಂದನೀಯ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ‌ಪಲಿಮಾರು ಮಠಕ್ಕೂ ಧನಸಹಾಯ ಘೋಷಿಸಿದ್ರು. ಆ ಧನಸಹಾಯ ನೀಡುವ ವೇಳೆ ಯಾರೂ ಕೂಡ ಫಲಾಪೇಕ್ಷೆ ಪಡೆದಿಲ್ಲ. ಶಾಸಕರು, ಮಂತ್ರಿಗಳು ಹಾಗೂ ಮುಜರಾಯಿ ವ್ಯವಸ್ಥೆ ಯಾವುದರಲ್ಲೂ ಸ್ವಾರ್ಥ ಧೋರಣೆ ಕಂಡುಬಂದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: 'ಯಡಿಯೂರಪ್ಪರಿಂದಲೇ ಬೆಳೆದು ಈಗ ಅವರ ವಿರುದ್ಧವೇ ಯತ್ನಾಳ ಕತ್ತಿ ಮಸೆಯುತ್ತಿದ್ದಾರೆ'

ಈ‌ ನಡುವೆ ಅಪಸ್ವರವೊಂದು ಕೇಳಿಬರುತ್ತಿದೆ. ಈ ಅಪಸ್ವರ ಸ್ವಂತ ಅಭಿಪ್ರಾಯ ಆಗಿರಲಿಕ್ಕಿಲ್ಲ. ಇದರ ಹಿಂದೆ ಯಾವುದೋ‌ ಕಾರಣ ಇರಬಹುದು. ಪ್ರಾಮಾಣಿಕ ಸೇವೆಯಲ್ಲಿ ಹುಳಿ ಹಿಂಡುವ ಕೆಲಸ ಆಗಬಾರದು. ಈ ಸರ್ಕಾರಕ್ಕೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು. ಎಲ್ಲರನ್ನೂ ಒಂದೇ ರೀತಿಯಲ್ಲಿ ತೆಗೆದುಕೊಂಡು ಹೋಗುವ ಕಾರ್ಯ ಕಷ್ಟದ ಕೆಲಸ ಅಲ್ಲ. ಈ ಹಿಂದೆ ಇದ್ದ ಕಡಿಮೆ‌ ಜಾಸ್ತಿ ಹಾಗೂ ಓಲೈಕೆ ಕಾರ್ಯ ಈಗ ಇಲ್ಲ. ಈವರೆಗೆ ಸಿಗದ ಪರಿಹಾದ ಈಗ ಮಠಮಂದಿರಗಳಿಗೆ ಸಿಕ್ಕಿರುವುದು ಅಭಿನಂದನೀಯ ಎಂದು ಉಡುಪಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

Last Updated : Apr 19, 2022, 10:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.