ಉಡುಪಿ: ಮೀನುಗಾರಿಕೆಗೆಂದು ತೆರಳಿ ಕಾಣೆಯಾಗಿದ್ದ ಮೀನುಗಾರನೋರ್ವನನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಅ. 23ರಂದು ಕರಾವಳಿ ಕೋಸ್ಟ್ ಗಾರ್ಡ್ ಮಾಹಿತಿ ಮೇರೆಗೆ ಉಡುಪಿ ಮಲ್ಪೆ ಲೈಟ್ ಹೌಸ್ ಬಳಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಕಡಲ ಅಬ್ಬರ ಜೋರಾಗಿದ್ದು, ಈ ನಡುವೆ ಅಲೆಯ ಅಬ್ಬರಕ್ಕೆ ಸಿಲುಕಿದ್ದ ಒರಿಸ್ಸಾ ಮೂಲದ 33 ವರ್ಷದ ಮೀನುಗಾರ ಗೊರಾಯ್ ರಾವ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ.
ರಕ್ಷಣೆ ಮಾಡಿದ ಬಳಿಕ ತೀವ್ರವಾಗಿ ಬಳಲಿದ್ದ ಮೀನುಗಾರನಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೋಸ್ಟ್ ಗಾರ್ಡ್ ಇಲಾಖೆ ತಿಳಿಸಿದ್ದು, ಮೀನುಗಾರ ಸುರಕ್ಷಿತವಾಗಿದ್ದಾನೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.