ಉಡುಪಿ: ಲಾಂಛನದ ಬಗ್ಗೆ ಈಗಾಗಲೇ ಸ್ಪಷ್ಟನೆ ಕೊಡಲಾಗಿದೆ. ಸಾರನಾಥದಲ್ಲಿರುವ ಅಶೋಕನ ಕಾಲದಲ್ಲಿರುವ ಲಾಂಛನ ಅನುಕರಿಸಲಾಗಿದೆ. ಆ ಲಾಂಛನದಿಂದಲೇ ಸಿಂಹದ ಮುಖಚರ್ಯೆ ತೆಗೆದುಕೊಳ್ಳಲಾಗಿದೆ. ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಂಛನ ವ್ಯಾಗ್ರವಾಗಿದೆ, ಉಗ್ರವಾಗಿದೆ ಎಂಬುದು ನಮ್ಮ ದೃಷ್ಟಿಕೋನವನ್ನು ಸೂಚಿಸುತ್ತದೆ. ವಿರೋಧ ಪಕ್ಷ ಮೊಸರಲ್ಲಿ ಕಲ್ಲು ಹುಡುಕುತ್ತದೆ. ಸಾರನಾಥ ಮಾದರಿಯನ್ನು ಯಥಾವತ್ತು ಮಾಡಲಾಗಿದೆ. ಕಾಂಗ್ರೆಸ್ ನೋಡುವ ದೃಷ್ಟಿ ಬೇರೆ, ನಾವು ನೋಡುವ ದೃಷ್ಟಿ ಬೇರೆ. ಕಾಂಗ್ರೆಸ್ ಇದರಲ್ಲಿ ರಾಜಕೀಯ ಹುಡುಕುತ್ತದೆ ಎಂದರು.
ನಮ್ಮಲ್ಲಿ ಕ್ರಿಯಾಶೀಲವಾದ ಪ್ರಧಾನಿ ಇದ್ದಾರೆ. ಸಿಂಹ ಹೇಗೆ ಸಶಕ್ತವಾಗಿ ಘರ್ಜನಾ ರೂಪದಲ್ಲಿರಬೇಕೋ ಅದು ನಮ್ಮ ಸಿಂಹ. ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದ್ದಾರೆ. ಕಾಂಗ್ರೆಸ್ನ ಸಂಸ್ಕೃತಿ ಹೇಗೋ ಈ ಸಿಂಹ ಹಾಗೆಯೇ ಕಾಣುತ್ತದೆ ಎಂದು ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ಓದಿ: ನಾಳೆಯಿಂದ 2 ದಿನ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನ