ಉಡುಪಿ: ಸಿನಿಮಾ ಶೈಲಿಯಲ್ಲಿ ಲಾಂಗ್ ಹಿಡಿದು ಕಾರು ಚೇಸ್ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಎರಡು ತಂಡಗಳು ಪ್ರತ್ಯೇಕ ಕಾರುಗಳಲ್ಲಿ ಚೇಸಿಂಗ್ ಮಾಡಿದ್ದಾರೆ. ನಾವುಂದ ಕಡೆಯಿಂದ ವೇಗವಾಗಿ ಬರುತ್ತಿದ್ದಾಗ ಹಟ್ಟಿಯಂಗಡಿ ಗ್ರಾಮಪಂಚಾಯತ್ ಬಳಿಯ ಗುಡ್ಡೆಯಂಗಡಿ ಬಳಿ ಒಂದು ಕಾರು ಪಲ್ಟಿಯಾಗಿದೆ.
ಚರಂಡಿಗೆ ಬಿದ್ದ ಕೆಂಪು ಬಣ್ಣದ ಬಲೆನೊ ಕಾರಿನಲ್ಲಿ ಲಾಂಗು, ಮಚ್ಚು ಪತ್ತೆಯಾಗಿವೆ. ಈ ಹಿಂದೆ ಈ ಎರಡು ಗುಂಪಿನ ನಡುವೆ ಗಲಾಟೆ ನಡೆದಿತ್ತಂತೆ. ಈ ಗಲಾಟೆಯ ಮುಂದುವರೆದ ಭಾಗವಾಗಿ ಈಗ ಈ ಘಟನೆ ಜರುಗಿದೆ. ಕಾರಿನಲ್ಲಿದ್ದ ಕೆಲವರು ಪರಾರಿಯಾಗಿದ್ದು, ಇಬ್ಬರು ಪತ್ತೆಯಾಗಿದ್ದಾರೆ. ಘಟನೆ ಸಂಬಂಧ ಗಂಗೊಳ್ಳಿ ಠಾಣೆಯಲ್ಲಿ ಕಾನೂನು ಪ್ರಕ್ರಿಯೆಗಳು ಜರುಗುತ್ತಿವೆ.