ETV Bharat / state

ಕಂಡಕ್ಟರ್ ಮೇಲೆ ಹಲ್ಲೆ, ದರೋಡೆ: ಘಟನೆಯ ವಿಡಿಯೋ ದಾಖಲು - video

ಬಸ್ಸ್ ಅಡ್ಡಗಟ್ಟಿ ಕಂಡಕ್ಟರ್ ಮೇಲೆ‌ ಹಲ್ಲೆ ನಡೆಸಿ  ಸಾವಿರಾರು ರೂಪಾಯಿ ದರೋಡೆ, ಸಿಸಿಟಿವಿ ಯಲ್ಲಿ ದೃಶ್ಯ ದಾಖಲು.

bus
author img

By

Published : Jul 2, 2019, 11:51 AM IST

ಉಡುಪಿ: ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್ಸನ್ನು ಗುಂಪೊಂದು ಅಡ್ಡಗಟ್ಟಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಸಾವಿರಾರು ರೂಪಾಯಿ ಹಣ ದೋಚಿದ ಘಟನೆ ನಡೆದಿದೆ.

ಕಂಡಕ್ಟರ್ ಮೇಲೆ‌ ಹಲ್ಲೆ ನಡೆಸುತ್ತಿರುವ ಗುಂಪು

ನಿಶಾನ್ ಟ್ರಾವೆಲ್ಸ್ಗೆ ಸೇರಿದ ಬಸ್​ ಮಧ್ಯಾಹ್ನ 3:15ಕ್ಕೆ ಉಡುಪಿಯಿಂದ ಹೊರಟಿತ್ತು. ಹೆಬ್ರಿ ಸೀತಾ ನದಿ ಬಳಿ ಕಾರೊಂದರಲ್ಲಿ ಬಂದಿದ್ದ ಗುಂಪು ಸ್ಥಳೀಯರಿಗೆ ಹಲ್ಲೆ ನಡೆಸುತ್ತಿದ್ದುದನ್ನು‌ ಕಂಡು ಚಾಲಕ ಬಸ್​ ನಿಲ್ಲಿಸಿದ್ದಾನೆ. ಈ ಸಂದರ್ಭದಲ್ಲಿ ಕಂಡಕ್ಟರ್ ಗಣೇಶ್ ಎನ್ನುವವರು ಹಲ್ಲೆ‌ ನಡೆಸುತ್ತಿದ್ದವರ ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದಾರೆ. ಇದರಿಂದ ಅಕ್ರೋಶಗೊಂಡ ಗುಂಪು ಎರಡು ಕಾರುಗಳಲ್ಲಿ ಬಸ್ಸನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

ಆಗುಂಬೆ ಬಳಿ ಮಂಡಗದ್ದೆ ಅರಣ್ಯ ಪ್ರದೇಶಕ್ಕೆ ಬಸ್ಸು ಬರುತ್ತಿದ್ದಂತೆ ಪಾನಮತ್ತರಾಗಿದ್ದ ಗುಂಪು ಬಸ್ಸು ಹತ್ತಿ‌ ಕಂಡಕ್ಟರ್ ಗಣೇಶ್​ಗೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಬಸ್ಸಿನಿಂದ‌ ಕೆಳ ಹಾಕಿ ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿ ಅವರ ಬಳಿ ಇದ್ದ ಸುಮಾರು ೨೦ ಸಾವಿರಕ್ಕೂ ಹೆಚ್ಚು ಹಣವನ್ನು‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಪಾನಮತ್ತರಾಗಿದ್ದ ಗುಂಪು ಪ್ರಯಾಣಿಕರಿಗೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಘಟನೆಯ ಎಲ್ಲಾ ದೃಶ್ಯಗಳು ಬಸ್ಸಿನಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.ಅರೋಪಿಗಳು ಉಡುಪಿ ಪರ್ಕಳ ಮೂಲದವರು ಎನ್ನಲಾಗಿದೆ.

Intro:ಉಡುಪಿ : ಬಸ್ಸ್ ಅಡ್ಡಗಟ್ಟಿ ಕಂಡಕ್ಟರ್ ಮೇಲೆ‌ ಹಲ್ಲೆ ನಡೆಸಿ  ಸಾವಿರಾರು ರೂಪಾಯಿ ದರೋಡೆ, ಸಿಸಿಟಿವಿ ಯಲ್ಲಿ ದೃಶ್ಯ ದಾಖಲು ‌
------------------------------------------------
ಆಂಕರ್ ಉಡುಪಿಯಿಂದ ಶಿವಮೊಗ್ಗ ಕ್ಕೆ ತೆರಳುತ್ತಿದ್ದ ಬಸ್ಸೊಂದನ್ನ ಗುಂಪೊಂದು ಅಡ್ಡಗಟ್ಟಿ ಕಂಡಕ್ಟರ್ ಮೇಲೇ ಹಲ್ಲೆ ನಡೆಸಿ ಸಾವಿರಾರು ರೂಪಾಯಿ ಹಣ ದೋಚಿದ ಘಟನೆ ನಡೆದಿದೆ. ನಿಶಾನ್ ಟ್ರಾವೆಲ್ಸ್ ಎನ್ನುವ ಬಸ್ಸು ಮಧ್ಯಾಹ್ನ 3:15 ಕ್ಕೆ ಉಡುಪಿಯಿಂದ ಹೊರಟ್ಟಿತ್ತು. ಹೆಬ್ರಿ ಸೀತಾನದಿ ಬಳಿ ಕಾರೊಂದರಲ್ಲಿ ಬಂದಿದ್ದ ಗುಂಪು ಸ್ಥಳೀಯರಿಗೆ ಹಲ್ಲೆ ನಡೆಸುತ್ತಿದ್ದನ್ನು‌ ಕಂಡು  ಚಾಲಕ  ಬಸ್ಸು ನಿಲ್ಲಿಸಿದ್ದಾನೆ. ಈ ಸಂಧರ್ಭದಲ್ಲಿ ಕಂಡಕ್ಟರ್ ಗಣೇಶ್ ಎನ್ನುವವರು  ಹಲ್ಲೆ‌ ನಡೆಸುತ್ತಿದ್ದವರ ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದಾರೆ. ಇದರಿಂದ ಅಕ್ರೋಶಗೊಂಡ ಗುಂಪು ಎರಡು ಕಾರುಗಳಲ್ಲಿ ಬಸ್ಸನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಅಂಗುಂಬೆ ಬಳಿ ಮಂಡಗದ್ದೆ ಅರಣ್ಯ ಪ್ರದೇಶಕ್ಕೆ ಬರುತ್ತಿದ್ದಂತೆ ಬಸ್ಸು ಬರುತ್ತಿದ್ದಂತೆ ಪಾನಮತ್ತರಾಗಿದ್ದ ಗುಂಪು ಬಸ್ಸು ಹತ್ತಿ‌ ಕಂಡಕ್ಟರ್ ಗಣೇಶ್ ಗೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಬಸ್ಸಿನಿಂದ‌ ಕೆಳ ಹಾಕಿ ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿ ಅತನಲ್ಲಿದ್ದ ಸುಮಾರು ೨೦ ಸಾವಿರಕ್ಕೂ ಹೆಚ್ಚು ಹಣವನ್ನು‌ಕಿತ್ತುಕೊಂಡು ಪರಾರಿಯಾಗಿದ್ದಾರೆ. ಪಾನಮತ್ತರಾಗಿದ್ದ ಗುಂಪು ಪ್ರಯಾಣಿಕರಿಗೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಘಟನೆಯ ಎಲ್ಲಾ ದೃಶ್ಯಗಳು  ಬಸ್ಸಿನಲ್ಲಿದ್ದ ಸಿಸಿಟಿವಿ ಯಲ್ಲಿ ದಾಖಲಾಗಿದೆ.ಅರೋಪಿಗಳು ಉಡುಪಿ ಪರ್ಕಳ ಮೂಲದವರು ಎನ್ನಲಾಗಿದೆ.
Body:Kn-udp-020719-bus-conductor-halle+harsha7202200-vlsConclusion:Kn-udp-020719-bus-conductor-halle+harsha7202200-vls
ETV Bharat Logo

Copyright © 2025 Ushodaya Enterprises Pvt. Ltd., All Rights Reserved.