ಉಡುಪಿ: ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಶ್ರೀಗಳು ಗುಣಮುಖರಾಗಲು ಜನರು ದೇವರಲ್ಲಿ ಪ್ರಾರ್ಥಿಸಬೇಕು. ನಿನ್ನೆಗಿಂತ ಇಂದು ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಮ ಮಂದಿರ ಹೋರಾಟ ನೆನಪಿಸಿದ ಸಿಎಂ ಬಿಎಸ್ವೈ, ಸ್ವಾಮೀಜಿ ಜೊತೆ ಅಂದು 16 ಜನ ಇದ್ದೆವು.16 ಜನರ ಪೈಕಿ ನಾನೂ ಒಬ್ಬ. ಇಂದು ರಾಮ ಮಂದಿರ ಕಟ್ಟುವ ಸುಸಂದರ್ಭ. ಸ್ವತಂತ್ರ್ಯ ಭಾರತದಲ್ಲಿ ಯಾವೊಬ್ಬ ಶ್ರೀಗಳೂ ಯಾರು ಕೂಡಾ ಇವರಷ್ಟು ಓಡಾಟ ಮಾಡುತ್ತಿಲ್ಲ. ಓಡಾಟ ಕಡಿಮೆ ಮಾಡಲು ನೂರಾರು ಬಾರಿ ಹೇಳಿದ್ದೆ. ಆದ್ರೆ, ನನ್ನ ಮಾತು ಕೇಳಲಿಲ್ಲ, ವಯೋಸಹಜ ಸಮಸ್ಯೆ ಕಾಡುತ್ತಿರುವುದರಿಂದ ಹೀಗಾಗಿದೆ ಎಂದು ತಿಳಿಸಿದರು.
ಸ್ವಾಮೀಜಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಅವರು ಈಗಿರುವ ಆರೋಗ್ಯ ಸಮಸ್ಯೆಯನ್ನು ದಾಟಿ ಬರಲಿ. ವೈದ್ಯರು ಎರಡು ದಿನಗಳಲ್ಲಿ ಆರೋಗ್ಯ ಸುಧಾರಣೆ ಆಗಲಿದೆ ಎಂದಿದ್ದಾರೆ. ಮೋದಿ ಅಮಿತ್ ಶಾ ಕೂಡ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿಸಿದರು.