ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾದ ಆಕ್ಸಿಜನ್ ಟ್ಯಾಂಕ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಯಿ ಚಾಲನೆ ನೀಡಿದರು.
ಕೊವೀಡ್ ಹಿನ್ನೆಲೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಮನಗಂಡು ದ್ರವ ರೂಪದ ಅಮ್ಲಜನಕ ಶೇಖರಣಾ ಘಟಕ ನಿರ್ಮಾಣ ಮಾಡಲಾಗಿತ್ತು. 50 ಲಕ್ಷ ರೂ. ವೆಚ್ಚದಲ್ಲಿ 6000 ಸಾವಿರ ಲೀ. ಸಾಮರ್ಥ್ಯದ ಘಟಕ ಇದಾಗಿದ್ದು, ಇಂದು ಜಿಲ್ಲೆಗೆ ಆಗಮಿಸಿದ ಗೃಹ ಸಚಿವರು ಘಟಕಕ್ಕೆ ಚಾಲನೆ ನೀಡಿದರು.
ಚಾಲನೆ ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಜನತೆಗೆ ಈ ಘಟಕ ವರದಾನವಾಗಿ ಪರಿಣಮಿಸಲಿದೆ ಎಂದು ಹೇಳಿದರು. ಈ ಸಂದರ್ಭ ಜಿಲ್ಲಾ ವೈದ್ಯಾಧಿಕಾರಿ ಸುದೀರ್ ಚಂದ್ರ ಸೂಡ, ಶಾಸಕ ರಘಪತಿಭಟ್, ಲಾಲಾಜೀ ಮೆಂಡನ್ ಸೇರಿದಂತೆ ಸರ್ಕಾರಿ ವೈದ್ಯರ ತಂಡ ಭಾಗವಹಿಸಿತ್ತು.