ETV Bharat / state

ಮಲ್ಪೆ:  ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಂಪೂರ್ಣ ಮುಳುಗಡೆ... ಮೀನುಗಾರರು ಬಚಾವ್ - ಮಲ್ಪೆ ಬೀಚ್​​ನಲ್ಲಿ ಬೋಟ್​​ ಮುಳುಗಡೆ ಸುದ್ದಿ

ಉಡುಪಿ ಮಲ್ಪೆ ಬೀಚ್​​ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್​ ವಾಪಸ್​ ಆಗುವ ವೇಳೆ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿಯಾಗಿ ಸಂಪೂರ್ಣ ಮುಳುಗಿ ಹೋಗಿದೆ.

boat drowned into water in malpe
ಮೀನುಗಾರಿಕೆಗೆ ತೆರಳಿದ್ದ ಬೋಟ್​​ ಮುಳುಗಡೆ
author img

By

Published : May 20, 2020, 7:48 PM IST

ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಂಪೂರ್ಣ ಮುಳುಗಡೆಯಾಗಿದೆ. ಮೀನುಗಾರಿಕೆಗೆ ತೆರಳಿ ವಾಪಸ್ ಆಗ್ತಿದ್ದ ವೇಳೆ ಈ ಘಟನೆ ನಡೆದಿದೆ.

ಮೀನುಗಾರಿಕೆಗೆ ತೆರಳಿದ್ದ ಬೋಟ್​​ ಮುಳುಗಡೆ
ಮಲ್ಪೆ ಬಂದರು ಸಮೀಪ ಬರುವಾಗ ಬಂಡೆಗೆ ಬೋಟ್ ತಾಗಿ ಸಂಪೂರ್ಣ ಮುಳುಗಡೆಯಾಗಿದೆ. ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಆಳ ಸಮುದ್ರ ಬೋಟ್ ಎನ್ನಲಾಗುತ್ತಿದೆ. ಮೇ 14 ರಂದು ಮಲ್ಪೆಯಿಂದ ಈ ಬೋಟ್​​​ ಆಳಸಮುದ್ರದ ಮೀನುಗಾರಿಕೆಗೆ ತೆರಳಿತ್ತು.
ಮೇ 19 ರಂದು ವಾಪಸ್ ಆಗುವಾಗ ಆಚಾತುರ್ಯ ನಡೆದಿದೆ. ಬೋಟ್​​ನ‌ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿತ್ತು. ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರಿಂದ ಬೋಟ್​​ನಲ್ಲಿದ್ದ 6 ಜನರನ್ನ ರಕ್ಷಣೆ ಮಾಡಲಾಗಿದೆ. ಸುಮಾರು 5 ಲಕ್ಷ ಮೌಲ್ಯದ ಮೀನು, ಬಲೆ, ಡೀಸೆಲ್ ಸಮುದ್ರದ ಪಾಲಾಗಿದೆ. ಸುಮಾರು 80 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕರಾವಳಿ‌ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.