ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಬೆಳಪು ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಸೋಲಾರ್ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕೆಳತ್ತೂರು ನಿವಾಸಿ ಕಿರಣ್ (32) ಸಿಕ್ಕಿಬಿದ್ದ ಖದೀಮ.
![Battery theft accused arrested in Udupi](https://etvbharatimages.akamaized.net/etvbharat/prod-images/kn-udp-01-30-solar-kalavu-7202200-av2mp4_30102020151602_3010f_1604051162_563.jpg)
ವ್ಯಾಪಕ ಕಳ್ಳತನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರೇ ಸೇರಿ ಒಂದು ಕಾರ್ಯಪಡೆ ರಚಿಸಿದ್ದರು. ಖದೀಮರ ಕಳ್ಳತನದಿಂದ ಬೇಸತ್ತ ಯುವ ಪಡೆ ಕಳೆದ ಹಲವು ದಿನಗಳಿಂದ ಕಾರ್ಯಾಚರಣೆಯಲ್ಲಿ ತೊಡಿಗಿದ್ದರು.
![Battery theft accused arrested in Udupi](https://etvbharatimages.akamaized.net/etvbharat/prod-images/kn-udp-01-30-solar-kalavu-7202200-av2mp4_30102020151602_3010f_1604051162_1040.jpg)
ಅಂದುಕೊಂಡಂತೆ ಇಂದು ಮುಂಜಾನೆ 5 ಗಂಟೆಗೆ ಸೋಲಾರ್ ಬ್ಯಾಟರಿ ಕಳವು ಮಾಡಲು ಬಂದ ಚೋರನನ್ನು ಸೆರೆ ಹಿಡಿದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಕಟ್ಟಿಹಾಕಿ ತಕ್ಷಣವೇ ಗ್ರಾಮ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ.
![Battery theft accused arrested in Udupi](https://etvbharatimages.akamaized.net/etvbharat/prod-images/kn-udp-01-30-solar-kalavu-7202200-av2mp4_30102020151602_3010f_1604051162_519.jpg)
ಸ್ಥಳಕ್ಕಾಗಮಿಸಿದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು, ಸರಣಿ ಕಳ್ಳತನದ ಬಗ್ಗೆ ಮಾಹಿತಿ ಪಡೆದು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯ ಸಹಿತ ಕದ್ದ ಬ್ಯಾಟರಿಗಳನ್ನು ವಶಕ್ಕೆ ಪಡೆದಿದ್ದಾರೆ.