ಉಡುಪಿ: ನಿಂತಿದ್ದ ಟೆಂಪೋಗೆ ಆಟೋವೊಂದು ಆಯತಪ್ಪಿ ಬಂದು ಗುದ್ದಿದೆ. ಇದರಿಂದಾಗಿ ಆಟೋ ಹಾಗೂ ಟೆಂಪೋ ಹಿನ್ನೀರಿಗೆ ಬಿದ್ದ ಘಟನೆ ಉಡುಪಿಯ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ.
ಚಾಲಕ ತನ್ನ ಟೆಂಪೋ ನಿಲ್ಲಿಸಿ ಬಂದರಿನ ಒಳಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಟೋವೊಂದು ನ್ಯೂಟ್ರಲ್ ಆಗಿದೆ. ಆಯತಪ್ಪಿದ ಆಟೋ ಬಂದರಿನ ಹಿನ್ನೀರಿಗೆ ಬಿದ್ದಿದ್ದೆ. ಹಿನ್ನೀರಿನಲ್ಲಿ ಸಂಪೂರ್ಣ ಹೂಳು ತುಂಬಿಕೊಂಡಿದ್ದು, ವಾಹನದಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಅಪಾಯ ತಪ್ಪಿದೆ. ಬಳಿಕ ನೀರಿನಲ್ಲಿ ಮುಳುಗಿ ಹೋಗಿದ್ದ ಆಟೋ, ಟೆಂಪೋವನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು.