ETV Bharat / state

ಉಡುಪಿ ಕೃಷ್ಣ ಮಠದಲ್ಲಿ ಎರಡು ಪ್ರತ್ಯೇಕ ದಿನ ಅಷ್ಟಮಿ ಆಚರಣೆ - ದೃಗ್ಗಣಿತ ಪಂಚಾಂಗ

ಹಲವು ಗೊಂದಲಗಳ ನಡುವೆ ಈ ಬಾರಿ ಅಷ್ಟಮಿ ಆಚರಣೆ ಒಟ್ಟು ಮೂರು ದಿನ ನಡೆಯಲಿದೆ. ಈ ಹಿಂದೆಯೂ ಹಲವು ಬಾರಿ ಎರಡು ಅಷ್ಟಮಿ ಆಚರಣೆಗಳಿಂದ ಗೊಂದಲ ಉಂಟಾಗಿತ್ತು. ಈ ಬಾರಿಯೂ ಅದೇ ಸಮಸ್ಯೆ ತಲೆದೋರಿದೆ.

Puja at Udupi Krishna Mutt
ಉಡುಪಿ ಕೃಷ್ಣ ಮಠದಲ್ಲಿ ಪೂಜೆ
author img

By

Published : Aug 18, 2022, 7:08 AM IST

Updated : Aug 18, 2022, 3:07 PM IST

ಉಡುಪಿ : ಉಡುಪಿಯ ಕೃಷ್ಣ ಮಠದಲ್ಲಿ ನಡೆಯುವ ಅಷ್ಟಮಿ ಹಾಗೂ ಮರು ದಿವಸ ನಡೆಯುವ ವಿಟ್ಲ ಪಿಂಡಿ ಉತ್ಸವ ಭಾರೀ ಪ್ರಸಿದ್ಧಿ ಪಡೆದ ಆಚರಣೆ. ಲಕ್ಷಾಂತರ ಜನ ಸೇರುವ ನಾಡಹಬ್ಬ. ಆದರೆ, ಈ ಬಾರಿ ಕೃಷ್ಣಾಷ್ಟಮಿ ಆಚರಣೆ ಬಗ್ಗೆ ಗೊಂದಲ ಉಂಟಾಗಿದ್ದು, ಅಷ್ಟಮಠಗಳಲ್ಲಿಯೇ ದಿನಾಂಕದ ವಿಷಯದಲ್ಲಿ ಏಕನಿರ್ಧಾರ ಸಾಧ್ಯವಾಗಿಲ್ಲ. ಇದರಿಂದ ಈ ಬಾರಿ ಎರಡು ಪ್ರತ್ಯೇಕ ದಿನಗಳಲ್ಲಿ ಅಷ್ಟಮಿ ಆಚರಣೆ ನಡೆಯಲಿದೆ.

ಉಡುಪಿ ಕೃಷ್ಣ ಮಠದಲ್ಲಿ ಎರಡು ಪ್ರತ್ಯೇಕ ದಿನ ಅಷ್ಟಮಿ ಆಚರಣೆ

ಹಲವು ಗೊಂದಲಗಳ ನಡುವೆ ಈ ಬಾರಿ ಅಷ್ಟಮಿ ಆಚರಣೆ ಒಟ್ಟು ಮೂರು ದಿನ ನಡೆಯಲಿದೆ. ಈ ಹಿಂದೆಯೂ ಹಲವು ಬಾರಿ ಎರಡು ಅಷ್ಟಮಿ ಆಚರಣೆಗಳಿಂದ ಗೊಂದಲ ಉಂಟಾಗಿತ್ತು. ಈ ಬಾರಿಯೂ ಅದೇ ಸಮಸ್ಯೆ ತಲೆದೋರಿದೆ. ಪರ್ಯಾಯ ಶ್ರೀಕೃಷ್ಣಾಪುರ ಮಠ, ಸೋದೆ, ಕಾಣಿಯೂರು, ಶೀರೂರು, ಭೀಮನಕಟ್ಟೆ ಮಠವು ತಿಥಿ ನಿರ್ಣಯ ಶ್ರೀಕೃಷ್ಣ ಪಂಚಾಂಗವನ್ನು (ಆರ್ಯಭಟೀಯ) ಅನುಸರಿಸುತ್ತಿದ್ದು, ಈ ಬಾರಿ ಆ. 19, ರಾತ್ರಿ 11.54ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ, ಆ. 20 ರಂದು ವಿಟ್ಲ ಪಿಂಡಿ (ಶ್ರೀಕೃಷ್ಣ ಲೀಲೋತ್ಸವ) ಸಂಭ್ರಮದಿಂದ ನಡೆಯಲಿದೆ.

ಆದರೆ ಪೇಜಾವರ, ಪಲಿಮಾರು, ಅದಮಾರು ಹಾಗೂ ಪುತ್ತಿಗೆ ಮಠವು ದೃಗ್ಗಣಿತ ಪಂಚಾಂಗವನ್ನು ಅನುಸರಿಸುತ್ತಿದ್ದು ಆ. 18, ರಾತ್ರಿ 11.39ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನವಾದರೆ, ಆ. 19, 20ಕ್ಕೆ ವಿಟ್ಲ ಪಿಂಡಿ ಶ್ರೀಕೃಷ್ಣ ಲೀಲೋತ್ಸವ ಆಚರಿಸಲಾಗುತ್ತಿದೆ. ಈ ನಡುವೆ ಪುತ್ತಿಗೆ ಮಠದಲ್ಲಿ ಮಾತ್ರ ಅಷ್ಟಮಿ ಏಕಾಚರಣೆ ನೆಲೆಯಲ್ಲಿ ಆ. 19, 20ಕ್ಕೆ ಅಷ್ಟಮಿ/ವಿಟ್ಲ ಪಿಂಡಿ ಜರುಗಲಿದೆ.

ಉಡುಪಿಯ ಅಷ್ಟಮಠಗಳಿಗಾದರೂ ಏಕರೂಪ ಪಂಚಾಂಗ, ಏಕರೂಪದ ಏಕಾದಶಿ ಆಚರಣೆ ಮಾಡಿ ಅನ್ನೋದು ಭಕ್ತರ ಬೇಡಿಕೆ ಬಹುಕಾಲದಿಂದ ಇದೆ. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಕೀರ್ತಿಶೇಷರಾದ ಬಳಿಕ ಈ ಬೇಡಿಕೆ ಮತ್ತಷ್ಟು ಮಹತ್ವ ಕಳೆದುಕೊಂಡಿದೆ. ಆದರೆ, ಉಡುಪಿಯ ಜನ ಪರ್ಯಾಯ ಮಠದವರು ಆಚರಿಸುವ ದಿನದಂದೇ ಅಷ್ಟಮಿಯನ್ನು ಆಚರಿಸಲು ರೂಡಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಈ ದೇಗುಲದಲ್ಲಿದೆ 1,268 ಕೆಜಿ ಚಿನ್ನದ ಶ್ರೀಕೃಷ್ಣನ ಪ್ರತಿಮೆ: ವಿಗ್ರಹ ರಕ್ಷಿಸಿದ್ದು ಔರಂಗಜೇಬನ ಮಗಳಂತೆ

Last Updated : Aug 18, 2022, 3:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.