ETV Bharat / state

ಉಡುಪಿಯಲ್ಲಿ 'ಅಪರಂಜಿ' ಕಾರ್ಯಕ್ರಮ...ಕಲಾ ಪ್ರತಿಭೆಗಳಿಂದ ರಸದೌತಣ

author img

By

Published : Jun 9, 2019, 11:42 PM IST

ನಗರದಲ್ಲಿಂದು ಕರಾವಳಿಯ ಪ್ರತಿಭೆಗಳಿಗಾಗಿ ಏರ್ಪಡಿಸಿದ್ದ ಅಪರಂಜಿ ಕಾರ್ಯಕ್ರಮದಲ್ಲಿ ವಿವಿಧ ಕಲಾರತ್ನಗಳು ಒಂದೇ ವೇದಿಕೆಯಲ್ಲಿ ರಂಗು ರಂಗಿನ ಪ್ರದರ್ಶನ‌ ನೀಡಿದರು.

ಉಡುಪಿ

ಉಡುಪಿ: ಕಲಾ ಪ್ರತಿಭೆ ಒಂದೆಡೆ ಸೇರುವುದೇ ಅಪರೂಪ. ಕಲಾ ರೂಪದ ವಿವಿಧ ಪ್ರದರ್ಶನಗಳ ಮುಲಕ ಕಲಾರಸಿಕರಿಗೆ ಮನರಂಜನೆಯ ರಸದೌತಣ ನೀಡಲು ಕರಾವಳಿಯ ಕಲಾ ಪ್ರತಿಭೆಗಳ ಅಪರಂಜಿ ಕಾರ್ಯಕ್ರಮವನ್ನು ನಗರದಲ್ಲಿ ಏರ್ಪಡಿಸಲಾಗಿತ್ತು.

ಉಡುಪಿಯಲ್ಲಿ ನಡೆದ 'ಅಪರಂಜಿ' ಕಾರ್ಯಕ್ರಮ

ಯೋಗದಲ್ಲಿ ಗಿನ್ನಿಸ್ ದಾಖಲೆ ಬರೆದ ಉಡುಪಿಯ ತನುಶ್ರೀ ಯೋಗ ಭಂಗಿಯ ಮೂಲಕ ಗಮನ ಸೆಳೆದರೆ, ಸ್ಪೀಡ್ ಪೇಂಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ವೀರ ಪ್ರದೀಶ್ ಮತ್ತು ರುಬಿಕ್ ಕ್ಯೂಬ್​ನಲ್ಲಿ ಗಿನ್ನಿಸ್ ದಾಖಲೆ ಬರೆದ ಪ್ರಥ್ವೀಶ್ ಜೋಡಿ ಕಲಾ ರಸಿಕರನ್ನು ಮೋಡಿ ಮಾಡಿತು. ಯಕ್ಷಗಾನ ಪ್ರದರ್ಶನ‌ ಮತ್ತು ದೀಪದ ನೃತ್ಯ ನೋಡುಗರ ಕಣ್ಮನ ಸೆಳೆಯಿತು.

Udupi
ಕಾರ್ಯಕ್ರಮದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿದ ಕಲಾವಿದರು

ಕೆಜಿಎಫ್ ಚಿತ್ರದ ಜೋಕೆ ಹಾಡಿನ ಗಾಯಕಿ ಖ್ಯಾತಿಯ ಉಡುಪಿಯ ಐರಾ ಆಚಾರ್ಯ ಮತ್ತು ಸರಿಗಮಪ ಖ್ಯಾತಿಯ ವೈಷ್ಣವಿ ರವಿ ಮತ್ತು ರಜತ್ ಮಯ್ಯ, ಡಾ. ಅಭಿಷೇಕ್ ರಾವ್ ವಿವಿಧ ಹಾಡುಗಳ ಮೂಲಕ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಖ್ಯಾತಿಯ ಅಂಜಲಿ ಶ್ಯಾನುಭಾಗ್ ಸ್ಯಾಕ್ಸೋಫೋನ್ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು.

Intro:ಕಲಾ ಪ್ರತಿಭೆಗಳು ಒಂದೆಡೆ ಸೇರುವುದೇ ಅಪರೂಪ. ಕಲಾ ರೂಪದ ವಿವಿಧ ಪ್ರದರ್ಶನಗಳ ಒಂದೇ ಕಡೆ ಆದ್ರೆ ಕಲಾರಸಿಕರಿಗೆ ಮನರಂಜನೆಯ ರಸದೌತಣ ಸಿಗೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಅಂತದ್ದೇ ಒಂದು ಕಾರ್ಯಕ್ರಮ ಕರಾವಳಿಯ ಕಲಾ ಪ್ರತಿಭೆಗಳ ಕಾರಂಜಿ ಅಪರಂಜಿ ಕಾರ್ಯಕ್ರಮ ಉಡುಪಿಯಲ್ಲಿ ನಡೆಯಿತು.

Body:ಕರಾವಳಿಯ ವಿವಿಧ ಕಲಾರತ್ನಗಳು ಒಂದೇ ವೇದಿಕೆಯಲ್ಲಿ ರಂಗು ರಂಗಿನ ಪ್ರದರ್ಶನ‌ ನೀಡಿದ್ರು. ಯೋಗದಲ್ಲಿ ಗಿನ್ನಿಸ್ ದಾಖಲೆ ಬರೆದ ಉಡುಪಿಯ ತನುಶ್ರೀ ಯೋಗ ಭಂಗಿಯ ಮೂಲಕ ಗಮನ ಸೆಳೆದ್ದದ್ದಲ್ಲದೆ , ಯಕ್ಷಗಾನ ಪ್ರದರ್ಶನ‌ಮತ್ತು ದೀಪದ ನ್ರತ್ಯದಲ್ಲಿ ವಿಶೇಷ ಪ್ರದರ್ಶನ ನೀಡಿದ್ರು.
ಸ್ಪೀಡ್ ಪೇಂಟಿಂಗ್ ನಲ್ಲಿ ಹೆಸರುವಾಸಿಯಾದ ವಿಶ್ವ ದಾಖಲೆ ವೀರ ಪ್ರದೀಶ್ ಮತ್ತು ರುಬಿಕ್ ಕ್ಯೂಬ್‌ ನಲ್ಲಿ ಗಿನ್ನಿಸ್ ದಾಖಲೆ ಬರೆದ ಪ್ರಥ್ವೀಶ್ ಜೋಡಿ ಕಲಾ ರಸಿಕರನ್ನು ಮೋಡಿ ಮಾಡಿತು.

Conclusion:ಕೆಜಿ ಎಫ್ ಜೋಕೆ ಹಾಡು ಖ್ಯಾತಿಯ ಉಡುಪಿಯ ಐರಾ ಆಚಾರ್ಯ ಮತ್ತು ಸರಿಗಮಪ ಖ್ಯಾತಿಯ ವೈಷ್ಣವಿ ರವಿ ಮತ್ತು ರಜತ್ ಮಯ್ಯ, ಡಾ. ಅಭಿಷೇಕ್ವರಾವ್ ವಿವಿಧ ಹಾಡುಗಳ ಮೂಲಕ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು.
ಇಂಡಿಯಾಸ್ ಗಾಟ್ ಟ್ಯಾಲೆಂಟ್ ಖ್ಯಾತಿಯ ಅಂಜಲಿ ಶ್ಯಾನುಭಾಗ್ ಸ್ಯಾಕ್ಸೋಫೋನ್ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದ್ರು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.