ಉಡುಪಿ: ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮವೇ ಎಂದು ಪೇಜಾವರ ಶ್ರೀ ವ್ಯಾಖ್ಯಾನಿಸಿದ್ದಾರೆ.
ಲಿಂಗಾಯತ ಧರ್ಮದ ಪ್ರತ್ಯೇಕತೆ ಬಗ್ಗೆ ಸಾಣೆಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಧರ್ಮ ಬಲಿಷ್ಠವಾಗಬೇಕು. ಲಿಂಗಾಯಿತರು ಹಿಂದೂಗಳಿಂದ ಬೇರೆಯಾಗಬಾರದು ಎಂದ ಅವರು, ಬಸವಣ್ಣನ ಬಗ್ಗೆ ನನಗೆ ಗೌರವ ಇದೆ. ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮದ ಭಾಗವೇ ಆಗಿದೆ ಎಂದು ಅವರು ತಿಳಿಸಿದರು.
ನಾವು ಸಂಘಟಿತರಾದರೆ ನಮ್ಮ ಧರ್ಮ, ಸಂಸ್ಕೃತಿ, ಭಾಷೆ ಉಳಿಯುತ್ತದೆ. ನಮ್ಮಲ್ಲಿ ಭೇದ ಬಂದರೆ ಭಾರತ ಛಿದ್ರವಾಗುತ್ತದೆ. ವೀರಶೈವ-ಲಿಂಗಾಯಿತರು ಒಂದಾಗಬೇಕು. ಲಿಂಗಾಯಿತ ಧರ್ಮವು ಪ್ರತ್ಯೇಕ ಎಂದು ಹೇಳುವವರು ಕಳುಹಿಸಿದ ಎಲ್ಲಾ ಪುಸ್ತಕವನ್ನು ನಾನು ಓದಿದ್ದೇನೆ. ಅದರಲ್ಲಿ ಏನೂ ಹೊಸ ವಿಷಯಗಳಿಲ್ಲ. ಲಿಂಗಾಯಿತ ಧರ್ಮವು ಪ್ರತ್ಯೇಕ ಧರ್ಮವೆಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.