ಉಡುಪಿ: ಕೊರೋನಾಗೆ ಕಣ್ಣ ಚಾಯ್ ಮದ್ದಂತೆ... ಹೌದು, ಹೀಗಂತ ಉಡುಪಿಯಲ್ಲಿ ಕಣ್ಣ ಚಾಯ್ (ಬ್ಲಾಕ್ ಟೀ) ಕುರಿತ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಮಾಡಿರುವಾತನ ಮಾತು ಕೇಳಿ ಕರಾವಳಿ ಜನ ಈಗ ಬ್ಲ್ಯಾಕ್ ಟೀ ಮೊರೆ ಹೋಗಿದ್ದಾರೆ. ಈ ಸಂದೇಶ ಈಗ ಕರಾವಳಿ ಭಾಗದಲ್ಲಿ ಗೊಂದಲಕ್ಕೂ ಕಾರಣವಾಗಿದೆ.
ಕರಾವಳಿ ಭಾಗದಲ್ಲಿ ಕಣ್ಣಚಾಯ್ ಕುರಿತ ಸಂದೇಶವೊಂದು ಒಂದು ದಿನದ ಹಿಂದೆ ವೈರಲ್ ಆಗಿತ್ತು. ಮಂಗಳವಾರ ಕಾಪು ಮಾರಿಪೂಜೆ ನಡೆಯಬೇಕಾಗಿತ್ತು. ಕೊರೋನಾ ಎಚ್ಚರಿಕೆಯಿಂದ ಮಾರಿಪೂಜೆ ನಡೆಯಲಿಲ್ಲ. ಆದ್ರೆ ಮಾರಿಗುಡಿಯ ದರ್ಶನದಲ್ಲಿ ದೇವಿಯ ಅಪ್ಪಣೆ ಎಂಬ ಮೆಸೇಜ್ ವೈರಲ್ ಆಗಿತ್ತು. ಕಣ್ಣ ಚಾಯಕ್ಕೆ ಬೆಲ್ಲ- ಅರಶಿಣ ಹಾಕಿ ಕುಡಿಯಲು ದೇವಿಯ ಅಪ್ಪಣೆ ಯಾಗಿದೆ ಎಂಬ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ವಿಡಿಯೋ ನೋಡಿದ ಕರಾವಳಿಯ ಬಹುತೇಕ ಜನರು ಮನೆಗಳಲ್ಲಿ ಕಣ್ಣ ಚಾಯ್ ಕುಡಿದಿದ್ದರು. ಇದು ಸುಳ್ಳು ಸುದ್ದಿ ಎಂದು ಖಚಿತ ಪಡಿಸಿದ್ದ ಕಾಪು ಮಾರಿಗುಡಿ ಆಡಳಿತ ಮಂಡಳಿ ಮಾರಿಗುಡಿಯಲ್ಲಿ ಈ ಥರದ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇನ್ನು ವಿಡಿಯೋ ಮಾಡಿದ ಭೂಪನೂ ಪತ್ತೆಯಾಗಿದ್ದು ಜನತೆ ದೇವಸ್ಥಾನಕ್ಕೆ ಕರೆದು ಬುದ್ಧಿವಾದ ಹೇಳಿದ್ದಾರೆ. ವಿಡಿಯೋ ಮೂಲಕ ಚಾಯ್ ಮೆಸೇಜ್ ಮಾಡಿದ ಭೂಪ ಕ್ಷಮೆ ಯಾಚಿಸಿದ್ದಾನೆ.