ಉಡುಪಿ: ಕುಂದಾಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಪ್ಪು ಚಿರತೆಯೊಂದು ಚಲಿಸುವ ರೈಲಿಗೆ ಸಿಕ್ಕಿ ಮೃತಪಟ್ಟಿದೆ.
ಸೋಮವಾರ ಮುಂಜಾನೆ ಬೈಂದೂರು ತಾಲೂಕು ನಾಡಾ ಗ್ರಾಮದ ಬಡಾಕೆರೆ ರೈಲ್ವೆ ಮೇಲ್ಸೇತುವ ಬಳಿ ಸುಮಾರು 4 ವರ್ಷದ ಗಂಡು ಚಿರತೆ ಆಹಾರ ಅರಸಿ ಬರುತ್ತಿದ್ದಾಗ ಎದುರಿಗೆ ಬಂದ ರೈಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಪ್ರಾಣ ಕಳೆದುಕೊಂಡಿದೆ.
ಓದಿ: ಕಳ್ಳರು ಸಾರ್ ಕಳ್ಳರು: ಕುಟುಂಬದ ತಾಯಿ, ಪುತ್ರ-ಪುತ್ರಿಯರು ಅಷ್ಟೇ ಯಾಕೆ ಸೊಸೆಯಂದಿರು ಕಳ್ಳರೇ!
ಮಾಹಿತಿ ತಿಳಿಯುತ್ತಲೇ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮತ್ತು ಸಿಬ್ಬಂದಿ ಚಿರತೆ ಕಳೇಬರವನ್ನ ವಶಕ್ಕೆ ಪಡೆದಿದ್ದಾರೆ. ನಂತರ ವಂಡ್ಸೆ ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದಾದ ನಂತರ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಅವರ ಸಮಕ್ಷಮದಲ್ಲಿ ವನ್ಯಜೀವಿ ನಿಯಮದ ಪ್ರಕಾರ ಅಂತಿಮ ಸಂಸ್ಕಾರ ಮಾಡಲಾಗಿದೆ.