ಉಡುಪಿ: ಜಿಲ್ಲೆಯಲ್ಲಿಂದು 9ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಂದು ಸಾವು ಸಂಭವಿಸಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.
6ಗಂಡು ಹಾಗೂ 4 ಮಹಿಳೆಯರಿಗೆ ಕೋವಿಡ್ -19 ಧೃಡಪಟ್ಟಿದೆ. 3 ಮಂದಿ ಮುಂಬೈನಿಂದ ಹಾಗೂ ಓರ್ವ ಹೈದರಾಬಾದ್ನಿಂದ ಬಂದಿರುವ ಸೋಂಕಿತರಾಗಿದ್ದಾರೆ. ಇನ್ನಿಬ್ಬರು ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರಾಗಿದ್ದಾರೆ. ಉಳಿದಂತೆ ಕುಂದಾಪುರದಿಂದ ಬೆಂಗಳೂರಿಗೆ ತೆರಳುವ ಇಬ್ಬರು ಬಸ್ ಚಾಲಕರು ಹಾಗೂ ಉಡುಪಿ ಜಿಲ್ಲೆಯ ಓರ್ವ ಬಟ್ಟೆ ಮಳಿಗೆ ಮಾಲಿಕನಿಗೆ ಕೋವಿಡ್-19 ಪತ್ತೆಯಾಗಿದೆ.
ಇನ್ನು ಜಿಲ್ಲೆಯಲ್ಲಿ ಇಂದು ಕೊರಾನಾ ಸೋಂಕಿತನೊಬ್ಬ ಮೃತಪಟ್ಟಿದ್ದಾನೆ. 48 ವರ್ಷದ ಮೃತ ವ್ಯಕ್ತಿ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಮುಂಬೈನಲ್ಲಿ ಚಿಕಿತ್ಸೆ ಪಡೆದು ಉಡುಪಿ ಜಿಲ್ಲೆಗೆ ಆಗಮಿಸಿದ ಬಳಿಕ ಮೃತಪಟ್ಟಿದ್ದಾರೆ. ಮರಣಾನಂತರ ಮಾಡಿರುವ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಧೃಢವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.