ETV Bharat / state

32,000 ಖಾಸಗಿ ವಾಹನಗಳನ್ನು ರಸ್ತೆಗಿಳಿಸುತ್ತೇವೆ: ಸುರೇಶ್ ನಾಯಕ್ - Bengaluru news

ಸರ್ಕಾರಿ ಬಸ್ ಸಂಸ್ಥೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ 32,000 ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸುತ್ತೇವೆ ಎಂದು ಉಡುಪಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

Udupi
ಉಡುಪಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್
author img

By

Published : Apr 7, 2021, 7:12 AM IST

ಉಡುಪಿ: ಸರ್ಕಾರಿ ಬಸ್ ಸಂಸ್ಥೆ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದು ಜನಜೀವನಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ 32,000 ಖಾಸಗಿ ವಾಹನಗಳನ್ನು ರಸ್ತೆಗಿಳಿಸುತ್ತೇವೆ ಎಂದು ಉಡುಪಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ , ಖಾಸಗಿ ಬಸ್​ ಒಕ್ಕೂಟದ ರಾಜ್ಯ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಉಡುಪಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್

ಇಂದಿನಿಂದ 8 ಸಾವಿರ ಬಸ್, 20 ಸಾವಿರ ಮ್ಯಾಕ್ಸಿ ಕ್ಯಾಬ್ ಓಡಾಟ ನಡೆಸಲಿದೆ. 4,000 ಸ್ಟೇಜ್ ಕ್ಯಾರೇಜ್ ವಾಹನಗಳು ನಮ್ಮ ಬಳಿ ಇವೆ. ಜನ ಸೇವೆಗೆ ಎಲ್ಲಾ ವಾಹನ ರಸ್ತೆಗೆ ಇಳಿಯುತ್ತದೆ. ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಬಸ್ ಏಕಸ್ವಾಮ್ಯತೆ ಇದೆ. ಖಾಸಗಿ ವಾಹನಗಳಿಗೆ ಪರವಾನಿಗೆ ಕೊಡಿ ಎಂದು ಅವರು ಒತ್ತಾಯಿಸಿದರು.

ರಾಜ್ಯಾದ್ಯಂತ ಖಾಸಗೀಕರಣ ವ್ಯವಸ್ಥೆ ಜಾರಿಗೆ ತನ್ನಿ. ಸರ್ಕಾರದ ತೆರಿಗೆ ಸಂಗ್ರಹಕ್ಕೆ ಬಹಳ ಉಪಯೋಗ ಆಗಲಿದೆ ಎಂದು ಇದೇ ವೇಳೆ ಅವರು ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.