ಕಾರ್ಕಳ (ಉಡುಪಿ): ಪುರಸಭೆ ವ್ಯಾಪ್ತಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದ 13 ಮಂದಿ ಮಂಗಳವಾರ ಬಿಡುಗಡೆ ಆಗಿದ್ದಾರೆ.
ಕ್ವಾರಂಟೈನ್ ಕೇಂದ್ರಗಳಾದ ಬಾಹುಬಲಿ ಪ್ರವಚನ ಮಂದಿರದಲ್ಲಿದ್ದ 7 ಮಂದಿ, ಜೈನ ಯಾತ್ರ ನಿವಾಸದಲ್ಲಿದ್ದ ಮೂವರು ಹಾಗೂ ತೆಳ್ಳಾರು ಶಬರಿ ಆಶ್ರಮದಲ್ಲಿದ್ದ 3 ಮಂದಿ ಸೇರಿ ಒಟ್ಟು 13 ಮಂದಿಗೆ ಸಸಿ ಕೊಟ್ಟು ಕಳುಹಿಸಲಾಯಿತು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಪರಿಸರ ಅಭಿಯಂತರ ಕೆ. ಮದನ್, ಕಂದಾಯ ಅಧಿಕಾರಿ ಶಿವಕುಮಾರ್, ಬಿಜೆಪಿ ಮುಖಂಡ ಮಣಿರಾಜ್ ಶೆಟ್ಟಿ , ಸಂತೋಷ್, ಹರೀಶ್‌ಶೆಣೈ, ವಿನಾಯಕ ಮಲ್ಯ, ವಿಜಯ ಸಪಲಿಗ ಇದ್ದರು.