ತುಮಕೂರು : ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಆಂಧ್ರ ಪ್ರದೇಶದ ಹಿಂದೂಪುರ ತಾಲೂಕಿನ ಪದ್ಧಪ್ಪರೆಡ್ಡಿಪಲ್ಲಿ ಗ್ರಾಮದ ಚಲಪತಿ(22) ಎಂದು ಗುರುತಿಸಲಾಗಿದೆ. ಡ್ಯಾಮ್ನಲ್ಲಿ ಮುಳುಗಿ ಸಾವನ್ನಪ್ಪಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿಯೇ ಇದ್ದ ಯುವಕರು ಆತನನ್ನು ಹೊತ್ತುಕೊಂಡು ಬಂದು ದಡ ಸೇರಿಸಿದ್ದಾರೆ.
ಯುವಕನ ದೇಹದಿಂದ ನೀರನ್ನು ಹೊರತೆಗೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.