ತುಮಕೂರು: ಸರ್ಕಾರದ ಅನುಮತಿ ಹಿನ್ನೆಲೆ ಇಂದು ಯಡಿಯೂರು ಸಿದ್ದಲಿಂಗೇಶ್ವರ ದೇಗುಲಗಳನ್ನು ಇಂದು ತೆರೆಯಲಾಯಿತು. ಈ ಮೂಲಕ ಎಂದಿನಂತೆ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ.
ಬೆಳಗ್ಗೆ 6 ಗಂಟೆಯಿಂದಲೇ ಭಕ್ತರಿಗೆ ದೇವರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಕೇವಲ ಕುಂಕುಮ ಹೂಗಳನ್ನು ಮಾತ್ರ ಪ್ರಸಾದವಾಗಿ ನೀಡಲಾಗುತ್ತಿದೆ. ಒಮ್ಮೆ ದೇವಸ್ಥಾನದ ಒಳಗೆ 20 - 25 ಭಕ್ತರಿಗಷ್ಟೆ ಪ್ರವೇಶಾವಕಾಶ ನೀಡಲಾಗಿದ್ದು, ಬೆಳಗ್ಗೆ 6 ರಿಂದ ಮಧ್ಯಾಹ್ನ 12, ಸಂಜೆ 5ರಿಂದ ರಾತ್ರಿ 8 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಇನ್ನು ಮುಂಜಾಗ್ರತ ಕ್ರಮವಾಗಿ ದೇಗುಲದ ಸುತ್ತಲೂ ಸ್ಯಾನಿಟೈಸೇಶನ್ ಮಾಡಲಾಗುತ್ತಿದೆ.